ಲೇಖಕ ಡಾ. ಸರಜೂ ಕಾಟ್ಕರ್ ಅವರ ಕೃತಿ ʼಝೆನ್ ವೀರ ಹೈಕುʼ. ಶ್ರೀ ಚನ್ನವೀರ ಶರಣರ ೨೦೦ ಶ್ರೀನುಡಿಗಳನ್ನು ಈ ಪುಸ್ತಕದಲ್ಲಿ ಹೈಕುಗಳ ಪ್ರಕಾರದಲ್ಲಿ ಬರೆಯಲಾಗಿದೆ. ಹೈಕು ಎನ್ನುವುದು ಜಪಾನಿ ಕಾವ್ಯದ ಒಂದು ಮಾದರಿಯಾಗಿದೆ. ಹೈಕುವಿನಲ್ಲಿ ಅತ್ಯಂತ ಕಡಿಮೆ ಶಬ್ದಗಳಲ್ಲಿ ಹೆಚ್ಚು ಮಾಹಿತಿಗಳನ್ನು ಹೇಳಲಾಗಿದ್ದು, ಓದುಗನನ್ನು ವಿಚಾರಕ್ಕೆ ಹಚ್ಚುತ್ತವೆ. ಲೇಖಕರು ಚನ್ನವೀರ ಶರಣರನ್ನು ಝೇನ್ ವೀರ ಶರಣರೆಂದೇ ಪರಿಭಾವಿಸಿದ್ದಾರೆ. ಕಥೆಯಲ್ಲಿ ಗುರು ಮತ್ತು ಶಿಷ್ಯ ಇಬ್ಬರ ನಡುವೆ ನಡೆಯುವ ಮಾತುಕತೆಗಳನ್ನು ಕಾಣಬಹುದು. ಗುರುವು ಕೆಲವು ವಿಚಾರಗಳನ್ನು ಶಿಷ್ಯನ ಆಲೋಚನೆಗೆೆ ಬಿಟ್ಟಾಗ ಆತ ಅದನ್ನು ಅರ್ಥೈಸಿಕೊಳ್ಳಲು ಪಡುವ ಕಷ್ಟ ಹಾಗೂ ಅರ್ಥವಾಗುತ್ತಾ ಬಂದಂತೆ ಗುರುಗಳ ಸೂತ್ರರೂಪಿ ನಿರ್ವಚನಗಳು ವಿಸ್ತಾರವನ್ನು ಪಡೆಯುತ್ತಾ ಹೋಗುವುದು ಈ ಕಥೆಯ ಮುಖ್ಯ ಅಂಶವಾಗಿದೆ.
©2024 Book Brahma Private Limited.