ಸರ್ವಜ್ಞ ವಚನ ನಿರ್ವಚನ ಎಂಬುದು ಲೇಖಕ ಕೆ.ಬಿ. ಮಲ್ಲೇಶಯ್ಯ ಅವರ ಕೃತಿ. ಸರ್ವಜ್ಞ ಮಹಾಕವಿಯು ತನ್ನ ಸಣ್ಣ ಸಣ್ಣ ತ್ರಿಪದಿಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಅಜರಾಮರನಾಗಿದ್ದಾನೆ. ಜೀವನದ ಮೂಲತತ್ವವನ್ನು ತ್ರಿಪದಿಗಳಲ್ಲಿ ಸೆರೆ ಹಿಡಿಯುವ ಮೂಲಕ ಅವುಗಳ ಅನ್ವಯಿಕತೆಯನ್ನು ಸಮರ್ಥಿಸಿಕೊಂಡಿದ್ದಾನೆ. ಅತ್ಯಂತ ಸರಳ ಜನಮಾನಸದ ಭಾಷೆಯ ಈ ತ್ರಿಪದಿಗಳು, ಬದುಕಿನ ಎಲ್ಲ ಆಯಾಮಗಳನ್ನು ವಿವರಿಸುತ್ತವೆ. ವಿರಾಗಿಯಂತೆ ಕಂಡರೂ ಸರ್ವಜ್ಞನು ಬದುಕಿನ ಐಭೋಗಗಳ ಅನುಭವವನ್ನು, ಅದರ ಪರಿಣಾಮಗಳನ್ನು, ಅನುಭವಿಸುವ ಇತಿ-ಮಿತಿಗಳನ್ನು, ಬದುಕಿನಲ್ಲಿ ಅವು ಉಂಟು ಮಾಡಬಹುದಾದ ತೊಂದರೆಗಳನ್ನು ವಿವರಿಸಿದ್ದಾನೆ. ಸರ್ವಜ್ಞನ ಇಂತಹ ವಚನಗಳ ಭಾವಾರ್ಥವನ್ನು ಸರಳ ಭಾಷೆಯಲ್ಲಿ ವಿವರಿಸುವ ಮೂಲಕ ಈ ವಿರಾಗಿಯ ವಿಚಾರಗಳನ್ನು ತಿಳಿಯಲು ಪ್ರೇರೇಪಿಸುತ್ತವೆ.
©2024 Book Brahma Private Limited.