ಕವಿ, ಸಂಶೋಧಕ ನಿಂಗನಗೌಡ.ಹ.ದೇಸಾಯಿ (ಹನಿ) ಅವರು ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಪರಸನಹಳ್ಳಿ ಗ್ರಾಮದವರು. ತಂದೆ ಹಳ್ಳೆಪ್ಪಗೌಡ. ತಾಯಿ ನೀಲಮ್ಮ ದೇಸಾಯಿ. ಪರಸನಹಳ್ಳಿಯಲ್ಲಿ ಪ್ರಾಥಮಿಕ ಹಾಗೂ ಕೆಂಭಾವಿಯಲ್ಲಿ ಪ್ರೌಡ ಶಿಕ್ಷಣ ಮತ್ತು ಸಿಂದಗಿಯಲ್ಲಿ ಪದವಿ ಶಿಕ್ಷಣ, ತದನಂತರ ಧಾರವಾಡದ ಕರ್ನಾಟಕ ವಿ.ವಿಯಲ್ಲಿ ಸ್ನಾತಕೋತ್ತರ ಶಿಕ್ಷಣ ಪೂರೈಸಿದರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸರಪುರ ತಾಳೂಕಿನ ವಿವಿಧೆಡೆ ಸೇವೆ ಸಲ್ಲಿಸಿ, ಚಿಣ್ಣರ ಮೇಳ, ಸಮುದಾಯ ಎಸ್.ಡಿ.ಎಂ.ಸಿ ಮೇಳ.ಚಿಣ್ಣರ ಅಂಗಳ, ಕಾಯ೯ಕ್ರಮಗಳನ್ನು ಸಂಘಟಿಸಿದ್ದಾರೆ. ಸದ್ಯ, ಸರಕಾರಿ ಬಾಲಕಿಯರ ಪ್ರೌಡಶಾಲೆಯಲ್ಲಿ ಇತಿಹಾಸ ಶಿಕ್ಷಕರಾಗಿದ್ದಾರೆ. ಪ್ರೌಢಶಾಲೆ ಹಾಗೂ ಕಾಲೇಜು ಮಕ್ಕಳಿಗಾಗಿ ಇತಿಹಾಸ ಸಪ್ತಾಹ '''ಹತ್ತರ ಭಯ ಹತ್ತಿರ ಬೇಡ’ ಎಂಬ ವಿಶಿಷ್ಠ ಸಮಾರಂಭ ಆಯೋಜಿಸು ಮೂಲಕ ಶಾಲಾ/ ಕಾಲೇಜು ಮಕ್ಕಳಲ್ಲಿ 'ಐತಿಹಾಸಿಕ ಹಾಗೂ ಪಠ್ಯ ವಿಷಯದ ಜ್ಞಾನ ನೀಡುತ್ತಿದ್ದಾರೆ. ಕೆಂಭಾವಿ ವಲಯದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದರು. ಸಾಹಿತ್ಯ ಸಮ್ಮೇಳನಗಳಲ್ಲಿ , ಮಠಗಳಲ್ಲಿ ಕವಿತೆಗಳ ವಾಚನ. ವೈಚಾರಿಕ ಉಪನ್ಯಾಸ ನೀಡಿದ್ದಾರೆ . ಇವರ ನಾಟಕಗಳು ರಂಗಭೂಮಿ ಮೇಲೆ ಪ್ರಯೋಗ ಕಂಡಿವೆ.
ಕೃತಿಗಳು: ಬೂಟ ಪಾಲಿಶ್ (ಕವನ ಸಂಕಲನ -1995), ಮಾವ ಕಟ್ಟಿದ ಮಾಂಗಲ್ಯ (ಸಾಮಾಜಿಕ ನಾಟಕ-2004), ಕಲಿಯಿರಿ- ಕಲಿಸಿರಿ ( ಶೈಕ್ಷಣಿಕ ನಾಟಕ-2010), ಮಾನವಂತರಮಗಳು (ಸಾಮಾಜಿಕ ನಾಟಕ-2018), ಜಾನಪದ ಸೌರಭ (ತ್ರಿಪದಿಗಳ ಸಂಪಾದನೆ -2019) ಸುರಪುರ ತಾಲ್ಲೂಕಿನ ದೇವಾಲಯ ಶಿಲ್ಪಗಳ ಕುರಿತು 60 ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ಬರೆದಿದ್ದು, ಬಹುತೇಕ ಲೇಖನಗಳು ನಾಡಿನ ಪ್ರಮುಖ ದಿನಪತ್ರಿಕೆಗಳಲ್ಲಿ, ಅಭಿನಂದನ ಗ್ರಂಥಗಳಲ್ಲಿ ಸ್ಮರಣ ಸಂಚಿಕೆಗಳಲ್ಲಿ ಪ್ರಕಟಗೊಂಡಿವೆ. ವಚನಗಳನ್ನು ರಚಿಸುತ್ತಿದ್ದು, ಓದುಗರ ಗಮನ ಸೆಳೆಯುತ್ತಿವೆ. "ಜಾನಪದ ಸೌರಭ " (ಜನಪದ ತ್ರಿಪದಿಗಳ ಸಂಪಾದನೆ),
ಪ್ರಶಸ್ತಿ-ಪುರಸ್ಕಾರಗಳು: ವಿಜಯ ಪ್ರಕಾಶನ.ನಾಲತ್ವಾಡ ಅವರಿಂದ -ಸಾಹಿತ್ಯ ಶ್ರೀ ಪ್ರಶಸ್ತಿ -2004, ದೇವರ ದಾಸಿಮಯ್ಯ ಸಮಿತಿಯಿಂದ -ಉತ್ತಮ ಸಂಶೋಧಕ-2010, ಗುರುಮಠಕಲ್ ದ-ಶ್ರೀ ಸಿರಿಗನ್ನಡ ಪ್ರತಿಷ್ಠಾನದಿಂದ - ಕಲ್ಯಾಣ ಕನಾ೯ಟಕ ಸಾಧಕ ಶಿಕ್ಷಕ - 2014 , ಯಾದಗಿರ ಸಾ. ಶಿ.ಇಲಾಖೆಯಿಂದ -ಜಿಲ್ಲಾ ಅತ್ಯುತ್ತಮ ಶಿಕ್ಷಕ -2014, ಸಗರದ ಎಸ್.ಆರ್.ಐ ಶಿಕ್ಷಣ ಸಂಸ್ಥೆಯಿಂದ -ಕನಾ೯ಟಕ ಚೇತನ -2015, ಕೆಂಭಾವಿಯ ಶ್ರೀಗುರು ಕಾಂತೇಶ್ವರ ಜನ ಕಲ್ಯಾಣ ಸಂಸ್ಥೆ ಯಿಂದ - ಶ್ರೀ ಗುರು ಕಾಂತೇಶ್ವರ ಕೃಪಾ ಭೂಷಣ ಸಾಹಿತ್ಯ ಪ್ರಶಸ್ತಿ -2016 , ನಗನೂರಿನ ಶ್ರೀ ಸೂಗೂರೇಶ್ವರ ಮಠದಿ೦ದ -ಶ್ರೀ ಸೂಗೂರೇಶ್ವರ ಸಿರಿ ಪ್ರಶಸ್ತಿ 2016, ಸಿಂದಗಿಯ ಪಿ.ಇ.ಎಸ್ ಕಾಲೇಜ ದಿಂದ -ಆದಶ೯ ಶಿಕ್ಷಕ ಪ್ರಶಸ್ತಿ -2017, ಯಾದಗಿರ ಜಿಲ್ಲಾ ಆಡಳಿತದಿಂದ -ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ -2017, ಹೆಗ್ಗನದೊಡ್ಡಿಯ ಕಲ್ಯಾಣ ನಾಡು ನುಡಿಸಿರಿ ಟ್ರಸ್ಟ್ವ ನಿಂದ ಶಿಕ್ಷಕ ರತ್ನ ಪ್ರಶಸ್ತಿ -2018, ಶಹಪುರದ ವನಶ್ರೀ ಶಿಕ್ಷಣ ಸಂಸ್ಥೆಯಿಂದ - ವನಶ್ರೀ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ -2019, ಕೊಪ್ಪಳದ ಜಿಲ್ಲಾ ನಾಗರಿಕ ವೇದಿಕೆ ವತಿಯಿಂದ -ರುಕ್ಮಿಣಿ ಭಾಯಿ ಸ್ಮಾರಕ ಸಾಹಿತ್ಯ ಶ್ರೀ ಪ್ರಶಸ್ತಿ -2019, ರಾಜ್ಯ ಮಟ್ಟದ ಶಿಕ್ಷಣ ಜ್ಞಾನ ಮಾಸಪತ್ರಿಕೆ ಸಮಿತಿಯಿಂದ ಸಾಹಿತ್ಯ.ಶಿಕ್ಷಣ ಸೇವಾ ರತ್ನ -2019, ರಾಯಚೂರಿನ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ವತಿಯಿಂದ -ಕಲ್ಯಾಣ ಕಣ್ಮಣಿ -2020, ಮೇದಕ(ಸೇಡಂ ) ಚೆನ್ನಕೇಶವ ಶಿಕ್ಷಣ ಸಂಸ್ಥೆಯಿಂದ ಅಕ್ಷರಲೋಕದ ನಕ್ಷತ್ರ -2020, - ಶ್ರೀ ಸುಭಾಶ್ಚಂದ್ರ ಪಾಟೀಲ. ಸ್ಮಾರಕ ಟ್ರಸ್ಟ ಪಾಳಾ ವತಿಯಿಂದ - ರಾಜ್ಯ ಬಸವ ಪುರಸ್ಕಾರ-2021, ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಪ್ರಶಸ್ತಿ -2021, ಬಲವಂತ ಬಹರಿ ಬಹದ್ದೂರ ಸಂಸ್ಥಾನ ಸುರಪುರ ದಿಂದ ಸೇರಿದಂತೆ ವಿವಿಧ ವತಿಯಿಂದ.ಸಂಘ-ಸಂಸ್ಥೆಗಳು ಗೌರವಿಸಿವೆ. 2013 ರಲ್ಲಿ ಚಂದನ ದೂರದಶ೯ನದ "ಬೆಳಗು-ಕಾಯ೯ಕ್ರಮದಲ್ಲಿ ಇವರ ಸಂದಶ೯ನ ಪ್ರಸಾರವಾಗಿದೆ .