ಅಂತರಾಷ್ಟೀಯ ಖ್ಯಾತಿಯ ಛಾಯಾಗ್ರಾಹಕ ಜೋಡಿ ಕೃಪಾಕರ, ಸೇನಾನಿ. ಪರಿಸರ ವಿಜ್ಞಾನಿಗಳಾಗಿ ತಮ್ಮ ವಿಜ್ಞಾನ ಬರಹಗಳ ಮೂಲಕ ಓದುಗರನ್ನು ಬೆರಗಿಗೆ ಹಚ್ಚಿದವರು. ಏಷಿಯಾಟಿಕ್ ಕಾಡುನಾಯಿಗಳ ಕುರಿತು ಅವರು ನಿರ್ಮಿಸಿರುವ 'ದಿ ಪ್ಯಾಕ್' ಸಾಕ್ಷ್ಯ್ತಚಿತ್ರಕ್ಕಾಗಿ’ ವನ್ಯಜೀವಿ ಛಾಯಾಗ್ರಾಹಣ ನಿರ್ಮಾಪಕರಾದ ಕೃಪಾಕರ, ಸೇನಾನಿ ಜೋಡಿಗೆ ಪ್ರತಿಷ್ಠಿತ ವೈಲ್ಡ್ ಸ್ಕ್ರೀನ್ ಚಲನಚಿತ್ರೋತ್ಸವದಲ್ಲಿ ಗ್ರೀನ್ ಆಸ್ಕರ್ ಪ್ರಶಸ್ತಿ ಅವರ ಶ್ರಮ ಮತ್ತು ಪರಿಸರಾಸಕ್ತಿಗೆ ದೊರೆತದ್ದಾಗಿದೆ. ಕೃಪಾಕರ-ಸೇನಾನಿ ವೀರಪ್ಪನ್ ಒತ್ತೆಯಾಳುಗಳಾಗಿದ್ದಾಗಿನ ಸಂಗತಿಗಳನ್ನು ಸೊಗಸಾಗಿ ದಾಖಲಿಸಿದ ’ಸೆರೆಯಲ್ಲಿ ಕಳೆದ 14 ದಿನಗಳು’ ಪುಸ್ತಕ. ಇಂಗ್ಲೀಷ್‌ನಲ್ಲೂ ಪರಿಸರದ ಕುರಿತು ಅನೇಕ ಕೃತಿಗಳನ್ನು ರಚಿಸಿದ್ದಾರೆ.