ಕರ್ನಾಟಕ ಹೆಸರಾಂತ ಕಲಾವಿದ ವೆಂಕಟಾಚಲಪತಿ. ಭಾವ ಶಿಲ್ಪ ಮತ್ತು ಸಮಕಾಲೀನ ಶಿಲ್ಪಗಳ ನಿರ್ಮಾಣದಲ್ಲಿ ಹೆಸರುವಾಸಿಯಾಗಿರುವ ’ಚಲಪತಿ’ ಅವರ ಕಲೆ ಮತ್ತು ಜೀವನವನ್ನು ಪರಿಚಯಿಸುವ ಕೃತಿಯಿದು.
ಕಲಾಮಂದಿರದ ಅ.ನ. ಸುಬ್ಬರಾಯರಿಗೆ ಕಾರ್ಡು ಬರೆದ ಬಾಲಕನೊಬ್ಬ ಅದಕ್ಕೆ ಬಂದ ಮಾರುತ್ತರ ಹಿಡಿದು ಬಸ್ ಹತ್ತಿದ. ಹಾಗೆ ಬೆಂಗಳೂರಿಗೆ ಬಂದ ಹುಡುಗ ನಾಡಿನ ಹೆಸರಾಂತ ಶಿಲ್ಪಿಗಳ ಸಾಲಿನಲ್ಲಿ ಸೇರುತ್ತಾನೆ ಎಂದು ಯಾರೂ ಊಹಿಸಲು ಸಾಧ್ಯವಿರಲಿಲ್ಲ. ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷರಾಗಿದ್ದ ವೆಂಕಟಾಚಲ ಪತಿ ಅವರು ರಾಜ್ಯ ಸರ್ಕಾರ ನೀಡುವ ಪ್ರತಿಷ್ಠಿತ ಜಕ್ಕಣಾಚಾರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಚಲಪತಿ ಅವರ ಕಲಾಕೃತಿಗಳ ಮಹತ್ವವನ್ನು ಕಲಾವಿಮರ್ಶಕ ಕೆ.ವಿ. ಸುಬ್ರಹ್ಮಣ್ಯಂ ಅವರು ಸೊಗಸಾಗಿ ವಿವರಿಸಿದ್ದಾರೆ.
©2025 Book Brahma Private Limited.