About the Author

ರಾಹು ಎಂತಲೇ ಪ್ರಸಿದ್ಧರಾಗಿರುವ ಆರ್.ಕೆ. ಹುಡಗಿ ಅವರು ಜನಿಸಿದ್ದು ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಮುಚಳಂಬ. ಕಲಬುರ್ಗಿ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ಇವರು ಕಲಬುರಗಿ ರಂಗಾಯಣದ ನಿದೇರ್ಶಕರಾಗಿದ್ದರು. ಸಮುದಾಯ ಸಂಘಟನೆಯ ಸಂಚಾಲಕರಾಗಿಯೂ ಕೆಲಸ ಮಾಡಿದ್ದಾರೆ. ಇವರು ಅನುವಾದಿಸಿರುವ ಕೃತಿಗಳೆಂದರೆ ಆರನೇ ಹೆಂಡತಿ ಆತ್ಮಕತೆ, ಧರೆಹೊತ್ತಿ ಉರಿದಾಗ, ಭಾರತೀಯ ಮಹಿಳಾ ವಿಮೋಚನೆಯ ಆಂದೋಲನ, ಅಮ್ಮಿ, ಭಯೋತ್ಪಾಧಕ, ಜಾತಿ ವ್ಯವಸ್ಥೆ, ಸೆಕ್ಯುಲರ್ ವಾದ ಬುಡ ಬೇರು ಮುಂತಾದವು ​​​​​. ಇವರಿಗೆ ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ, 2022ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಹಿರಿಯರಿಗೆ ನೀಡುವ ಗೌರವ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿಗಳು ಒಲಿದು ಬಂದಿವೆ. 

ಆರ್‌.ಕೆ. ಹುಡಗಿ (ರಾಹು)