ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಅವರ ಕೃತಿ-ಯಕ್ಷಗಾನ ಸಾಹಿತ್ಯ ಚರಿತ್ರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಕೃತಿಗೆ ಬೆನ್ನುಡಿ ಬರೆದು ‘ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಅವರ ಪ್ರಯತ್ನ ನನಗೆ ಯಾಕೆ ಇಷ್ಟವಾಯಿತು ಎಂದರೆ ಯಕ್ಷಗಾನ ಒಂದು ಸಮೂಹಕಲೆ. ಅದರ ಗೀತ, ಗದ್ಯಕಥನ ಒಂದು ಕಡೆಯಾದರೆ, ಮುಖವರ್ಣಿಕೆ, ನೃತ್ಯ, ಹಾಡುಗಾರಿಕೆ ಇನ್ನೊಂದು ಕಡೆ. ಎಲ್ಲವೂ ಒಂದೊಂದು ಕಡೆ ಪ್ರತ್ಯೇಕವಾಗಿ ಬೆಳವಣಿಗೆ ಕಂಡ ಕಲೆಗಳಾದರೆ, ಇವೆಲ್ಲ ನಿರ್ದಿಷ್ಟ ಪ್ರಮಾಣದಲ್ಲಿ ಸಂಯೋಗಗೊಂಡು ಆದ ಯಕ್ಷಗಾನ ಇನ್ನೊಂದು ಕಲೆ. ತಾಳಮದ್ದಲೆ, ಅರ್ಥಧಾರಿಗಳು ತಮಗೆ ಗೊತ್ತಿಲ್ಲದೇ ಮಾಡುವ ಸೃಜನಶೀಲವಾದ ಮತ್ತೊಂದು ಕಲೆ. ಇಷ್ಟು ಸಂಕೀರ್ಣವಾಗಿ ತನ್ನ ಅಂಗಾಂಗಗಳೆಲ್ಲ ಸ್ವತಂತ್ರ ಕಲೆಗಳಾಗಿರುವ ಇಂತಹ ಕಲೆಯನ್ನು ನಾನು ಪ್ರಪಂಚದಲ್ಲೇ ಕಂಡಿಲ್ಲ. ಇದನ್ನು ಆಳವಾಗಿ ಅಧ್ಯಯನ ಮಾಡಿ, ಅದರ ಸಾಹಿತ್ಯವನ್ನು ಪ್ರತ್ಯೇಕಿಸಿ, ಅದರ ಇತಿಹಾಸವನ್ನು ಬರೆದಿದ್ದು ಆಶ್ಚರ್ಯಕರ ಸಾಧನೆ. ಇಂತಹ ಸಾಧನೆ ಮಾಡಿದ ಕಬ್ಬಿನಾಲೆ ಅವರಿಗೆ ಕೃತಜ್ಞ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.