ʼಯಕ್ಷಗಾನ ಪಂಚರಾತ್ರ’ ಎಂಬುದು ಭಾಸನ ಪಂಚರತ್ನ ನಾಟಕದ ಯಕ್ಷಗಾನ ರೂಪವಾಗಿದೆ. ಲೇಖಕ ಪ್ರೊ. ಬಿ.ಎಚ್ ಶ್ರೀಧರ ರಚಿಸಿದ್ದಾರೆ. ಕೃತಿಯಲ್ಲಿ ಉಪೋದ್ಘಾತ, ಪ್ರಸ್ತಾವನೆ. ಪಂಚರಾತ್ರ ಪ್ರಸಂಗ ಹಾಗೂ ಅದರಡಿಯಲ್ಲಿ ಅಂಕ ಒಂದು, ಅಂಕ ಎರಡು ಮತ್ತು ಅಂಕ ಮೂರು ಅಧ್ಯಾಯಗಳನ್ನು ಹೊಂದಿದೆ. ಭಾಸನ ನಾಟಕಗಳೆಂದು ಪ್ರಸಿದ್ಧವಾಗಿರುವ ನಾಟಕಗಳು ಯಕ್ಷಗಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ, ಈ ಕೃತಿಯು ಮಹತ್ವಪೂರ್ಣ ಪಾತ್ರ ವಹಿಸುತ್ತದೆ. ಗೀತ, ನೃತ್ಯ, ಅಂಗಾಭಿನಯ, ವೇಷ, ವಾದ್ಯ, ಸಂವಾದಗಳು ಸಮಕಾಲೀನವಾಗಿ ಬುಡದಿಂದ ತುದಿಯವರೆಗೆ ಭಾವಾಭಿವ್ಯಕ್ತಿಯನ್ನು ಮಾಡುತ್ತಾ ಹೋಗುವ ಅದ್ವಿತೀಯ ರಸರಚನೆ ಎನಿಸಿದ ಯಕ್ಷನಾಟಕವು ಭರತಹೃದಯದ ಸಾರಭೂತ ‘ಕಲಾಯೋಜನೆ’ ಎಂದು ಕೃತಿಯ ಪ್ರಸ್ತಾವನೆಯಲ್ಲಿ ಗ್ರಂಥಕರ್ತರು ವಿವರಿಸಿದ್ದಾರೆ.
©2025 Book Brahma Private Limited.