‘ಜಾಂಬವತಿ ಕಲ್ಯಾಣ’ ಲೇಖಕ ಬಿದರಹಳ್ಳಿ ನರಸಿಂಹಮೂರ್ತಿ ಅವರು ಸಂಪಾದಿಸಿರುವ ಯಕ್ಷಗಾನ ಪ್ರಸಂಗ. ಜಾನಪದ ಸಾಹಿತ್ಯವನ್ನು ಬೆಳಕಿಗೆ ತರುವಾಗ ಮೂಲಕ್ಕೆ ಚ್ಯುತಿಬಾರದಂತೆ ಸಂಪಾದಿಸುವುದು ಅಗತ್ಯ. ಆದರೆ ಇಷ್ಟರಿಂದಲೇ ಜನಪದ ಸಾಹಿತ್ಯ ಸಾರ್ಥಕಗೊಳ್ಳುವುದಿಲ್ಲ. ಅದರ ಮೂಲ ಸತ್ವವನ್ನು ಹಿಡಿದಿಡುವುದು ಜೊತೆಗೆ ಅದರಂತಾರ್ಥವನ್ನು ಇಂಗಿತವನ್ನು ಇವತ್ತಿನ ತುರ್ತಿಗೆ ಒಗ್ಗಿಸಿಕೊಳ್ಳುವುದು ಆಧುನಿಕ ಯುಗದ ಅವಶ್ಯಕತೆ ಆಗಿದೆ. ಹಾಗೇ ಮಾಡಿದಾಗ ಜನಪದ ಸಾಹಿತ್ಯ ಸಾರ್ಥಕ ಪಡೆಯುತ್ತದೆ. ಆಧುನಿಕ ಬದುಕಿಗೆ ಸೌಂದರ್ಯ ಲಭಿಸುತ್ತದೆ. ಅಂತಹ ಸೌಂದರ್ಯ ಒದಗಿಸುವ ನಿಟ್ಟಿನಲ್ಲಿ ಲೇಖಕ ಬಿದರಹಳ್ಳಿ ನರಸಿಂಹಮೂರ್ತಿ ಅವರು ಜಾಂಬವತಿ ಕಲ್ಯಾಣವೆಂಬ ಯಕ್ಷಗಾನ ಪ್ರಸಂಗವನ್ನು ಸುಂದರವಾಗಿ ಸಂಪಾದಿಸಿದ್ದಾರೆ.
©2025 Book Brahma Private Limited.