ʼಯಕ್ಷಗಾನ ಪ್ರಸಂಗ ಪಂಚಮಿʼ ಪ್ರಸಂಗ ಕೃತಿಯನ್ನು ಲೇಖಕ ಕಂದಾವರ ರಘುರಾಮ ಶೆಟ್ಟಿ ರಚಿಸಿದ್ದಾರೆ. ಈ ಕೃತಿಯು ಒಟ್ಟು ಐದು ಪ್ರಸಂಗಗಳನ್ನು ಹೊಂದಿದೆ. ಪುಸ್ತಕದ ಪರಿವಿಡಿಯಲ್ಲಿ ನಳದಮಯಂತಿ, ಗಂಗಾಶಾಪ, ಜಗನ್ನಾಥ ಲೀಲೆ, ಆದಿಚುಂಚನಗಿರಿ ಮಹಾತ್ಮೆ, ಶ್ರೀ ಶಿರಡಿ ಸಾಯಿ ಬಾಬಾ ಮಹಾತ್ಮೆ ಪ್ರಸಂಗಗಳನ್ನು ಒಳಗೊಂಡಿದೆ.ಇಲ್ಲಿನ ಪ್ರಸಂಗಗಳನ್ನು ಬೇಡಿಕೆಗನುಸಾರವಾಗಿ ರಚಿಸಲಾಗಿದೆ. ದೇಶದ ಪ್ರಸಿದ್ದ ಕ್ಷೇತ್ರಗಳ ಮಹಾತ್ಮೆಯನ್ನು ಇಲ್ಲಿನ ಮೂರು ಪ್ರಸಂಗಗಳು ಸಾರಿದರೆ, ಉಳಿದ ನಳಚರಿತ್ರೆಯನ್ನು ವ್ಯಾಸಭಾರತದಿಂದ, ಗಂಗಾಸಾಪವು ಜೈಮಿನಿ ಭಾರತವನ್ನು ಆಧರಿಸಿ ಬರೆಯಲಾಗಿದೆ. ಚಾಲ್ತಿಯಲ್ಲಿರುವ ನಳಚರಿತ್ರೆಗೂ ಇಲ್ಲಿನ ನಳಚರಿತ್ರೆಗೂ ಕೆಲವೊಂದು ವ್ಯತ್ಯಾಸವಿದೆ. ಮುಖ್ಯವಾಗಿ ಚಾಲ್ತಿಯ ಪ್ರಸಂಗದಲ್ಲಿ ನಳನಿಗೆ ಶನಿಯ ಕಾಟವಾದರೆ ಇದರಲ್ಲಿ ಆತನಿಗೆ ಕಲಿ, ದ್ವಾಪರರು ಕಷ್ಟ ನೀಡುತ್ತಾರೆ.
©2025 Book Brahma Private Limited.