ಆಪ್ತ ಬಂಧನ

Author : ಸೃಜನ್ ಗಣೇಶ್ ಹೆಗಡೆ

Pages 40

₹ 46.00




Year of Publication: 2012
Published by: ಶ್ರೀಯಕ್ಷ ಪ್ರಕಾಶನ
Address: ಮಾರುತಿಪುರ (ಅಂ) ಹೊಸನಗರ(ತಾ) ಶಿವಮೊಗ್ಗ (ಜಿ)-577412
Phone: 6362169811

Synopsys

ಲೇಖಕ ಸೃಜನ್ ಗಣೇಶ್ ಹೆಗಡೆ ಅವರ ಕೃತಿ-ಆಪ್ತ ಬಂಧನ. ಯಕ್ಷಗಾನ ಪ್ರಸಂಗವನ್ನು ವಿವರಿಸುವ ಕೃತಿ. ಜಾನಪದೀಯ ದೃಶ್ಯ ಕಲೆ ಹಾಗೂ ಸಾಹಿತ್ಯದಲ್ಲಿ ಯಕ್ಷಗಾನ ಕಲೆಯು ತನ್ನದೇ ಆದ ಮುದ್ರೆ ಒತ್ತಿದೆ. 

ಯಕ್ಷಗಾನ ಕ್ಷೇತ್ರದಲ್ಲಿ ಪೌರಾಣಿಕ ಆಖ್ಯಾನಗಳ ಜೊತೆಗೆ ಕಾಲ್ಪನಿಕ, ಸಾಮಾಜಿಕ ಆಖ್ಯಾನಗಳೂ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಈ ನಿಟ್ಟಿನಲ್ಲಿ  'ಆಪ್ತಬಂಧನ' ಯಕ್ಷಗಾನ ಪ್ರಸಂಗವು ಒಂದು ಸಾಮಾಜಿಕ ಮೌಲ್ಯವನ್ನು ಬಾಂಧವ್ಯದ ಸವಿಯಲ್ಲಿ ನೀಡುವ ಪ್ರಸಂಗ. ಪ್ರಸಂಗದ ಕಥೆಯಲ್ಲಿ ತಂದೆಯ ಹುಡುಕಾಟವಿದ್ದು, ಬಾಂಧವ್ಯದ ಬೆಸುಗೆ ಯಾವ ವಿಧದಲ್ಲಿರುತ್ತದೆ ಎಂಬ ದನಿಯನ್ನು ಈ ಕೃತಿ ಸಾರುತ್ತದೆ.

ಲೇಖಕರು ಸ್ವತಃ ಯಕ್ಷಗಾನ ಭಾಗವತರೇ ಆಗಿದ್ದರಿಂದ ಒಂದು ಉತ್ತಮವಾದ ಅಧ್ಯಯನದ ಮುಖೇನ ಮಟ್ಟುಗಳ ಪರಿಚಯದೊಂದಿಗೆ ಈ ಕೃತಿಯನ್ನು ಕಟ್ಟಿಕೊಟ್ಟಿದ್ದಾರೆ. 

About the Author

ಸೃಜನ್ ಗಣೇಶ್ ಹೆಗಡೆ
(26 September 1997)

ಸೃಜನ್ ಗಣೇಶ ಹೆಗಡೆ ಅವರ ಕಾವ್ಯನಾಮ -ಸೃಜನಾಲೋಚನ. ತಂದೆ- ಶ್ರೀಧರ್ ಹೆಗಡೆ ತಾಯಿ- ಜಯಲಕ್ಷ್ಮಿ ಹೆಗಡೆ.  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾರುತಿಪುರ ಸಮೀಪದ ಗುಬ್ಬಿಗ ಗ್ರಾಮದವರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು.ಯಕ್ಷಗಾನ ಭಾಗವತಿಕೆ, ತತ್ವಶಾಸ್ತ್ರ, ಅಧ್ಯಾತ್ಮ ವೈಚಾರಿಕತೆ, ವಿಮರ್ಶೆ ಕ್ಷೇತ್ರದಲ್ಲಿ ಆಸಕ್ತಿ. ಇದೆ.  ಕೃತಿಗಳು- ಗೊಂಬೆಯ ಸಂಕಟ, ರಾಧಾಸ್ನೇಹಿ, ಅನಂತ ಸೋಪಾನ(ಕವನ ಸಂಕಲನ) ಆಪ್ತ ಬಂಧನ, ಗೋಜಗಾಮೃತ (ಯಕ್ಷಗಾನ ಪ್ರಸಂಗಗಳು) . ...

READ MORE

Related Books