ಲೇಖಕ ಎ. ಮೋಹನ ಕುಂಟಾರ್ ಅವರು ಬರೆದ ಕೃತಿ-ಯಕ್ಷಗಾನ ಸ್ಥಿತ್ಯಂತರ. ಮಂಗಳೂರು ವಿಶ್ವವಿದ್ಯಾಲಯದಿಂದ ಯಕ್ಷಮಂಗಳ ಪ್ರಶಸ್ತಿ ಲಭಿಸಿದೆ. ಜಾನಪದೀಯ ಕಲೆಯಾದ ಯಕ್ಷಗಾನವು ಆಧುನಿಕ ಒತ್ತಡಕ್ಕೆ ಸಿಕ್ಕು ಹತ್ತು ಹಲವು ಹಂತದಲ್ಲಿ ಸ್ಥಿತ್ಯಂತರಗಳನ್ನು ಕಂಡಿದೆ. ಅವುಗಳನ್ನು ಗುರುತಿಸಿ, ವಿಶ್ಲೇಷಿಸಿ, ಕಾಲಕ್ರಮೇಣದ ಈ ಸ್ಥಿತ್ಯಂತರಗಳನ್ನು ಎಷ್ಟರಮಟ್ಟಿಗೆ ಒಪ್ಪಿಕೊಳ್ಳಬೇಕು ಎಂಬ ಬಗ್ಗೆ ಜಿಜ್ಞಾಸೆಯ ಕೃತಿ ಇದು. ಹೀಗೆ ಸ್ಥಿತ್ಯಂತರಕ್ಕೆ ಒಳಗಾಗುವ ಕಲೆಯೊಂದರ ಒಟ್ಟು ಸ್ವರೂಪವು, ಭವಿಷ್ಯದಲ್ಲಿ ಅದು ಪಡೆಯುವ ರೂಪವನ್ನು ಲೇಖಕರು ವಿಶ್ಲೇಷಿಸಿದ್ದಾರೆ.
©2025 Book Brahma Private Limited.