ʼಮಂಜಯ್ಯ ಗಣಪತಿ ಶೇಣ್ವಿಯವರ ಎರಡು ಪ್ರಸಂಗಗಳುʼ ಪ್ರಸಂಗ ಕೃತಿಯನ್ನು ಲೇಖಕ ಶಾ, ಮಂ. ಕೃಷ್ಣರಾಯ ರಚಿಸಿದ್ದಾರೆ. ಈ ಕೃತಿಯು ರತ್ನಾವತಿ ಕಲ್ಯಾಣ ಮತ್ತು ಉಷಾ ಪರಿಣಯ ಎಂಬ ಎರಡು ಪ್ರಸಂಗಗಳನ್ನು ಹೊಂದಿದೆ. ಇವುಗಳಲ್ಲಿ ರತ್ನಾವತಿ ಕಲ್ಯಾಣವು ಕರ್ಣ- ರತ್ನಾವತಿಯೆಂದು ಹಿಂದೆ ಪ್ರಸಿದ್ದವಾದ ಪ್ರಸಂಗವೊಂದರ ಕಥೆಯನ್ನು ಆಧರಿಸಿದೆ. ಕರ್ಣನ ವಿವಾಹ ವೃತ್ತಾಂತವನ್ನು ರಂಜಕವಾಗಿ ಹೇಳುತ್ತದೆ. ಉಷಾಪರಿಣಯ ಪ್ರಸಂಗವು ಹರಿವಂಶ ಪುರಾಣದ ಪ್ರಸಿದ್ದ ಕಥೆಯನ್ನು ಆಧರಿಸಿದೆ. ಸಹಜವಾದ ಕವಿತ್ವಶಕ್ತಿಯಿದ್ದು ಗಾಮ್ಯ ಸೊಗಡಿದೆ. ಕನ್ನಡ ಸಾಹಿತ್ಯ ನಂದನದಲ್ಲಿ ವಿಕಸನಗೊಂಡ ವಿವಿಧ ಛಂದೋಕುಸುಮಗಳ ಗ್ರಹಿಕೆಯಿಂದ ಸಿದ್ದಗೊಂಡ ಪದ್ಯಗಳ ಚೌಕಟ್ಟನಲ್ಲೇ ಇಲ್ಲಿನ ಆಶುಸಂಭಾಷಣೆಗಳು ನಡೆಯುತ್ತವೆ.
©2025 Book Brahma Private Limited.