ಸಂರಚನಾವಾದ ಎನ್ನುವುದು ಮೂಲಭೂತವಾಗಿ ಜೀವನವನ್ನು ನೋಡುವ ದೃಷ್ಟಿಯೆಂದು ಹೇಳಬಹುದು. ಈ ಸಿದ್ಧಾಂತದ ಪ್ರಕಾರ ಜೀವನವನ್ಬು ವೀಕ್ಷಿಸುವ ಪ್ರತಿಯೊಬ್ಬ ಮನುಷ್ಯನೂ ತಾನು ಕಂಡುಕೊಂಡ ಸತ್ಯವನ್ನು ತನ್ನದೇ ಆದ ರೀತಿಯಲ್ಲಿ ಸೃಜಿಸಿಕೊಳ್ಳುತ್ತಾನೆ. ಈ ಕ್ರಿಯೆಯಲ್ಲಿ ಜಗತ್ತು ಮತ್ತು ಅದನ್ನು ವೀಕ್ಷಿಸುವವನ ನಡುವೆ ಏರ್ಪಡುವ ಸಂಬಂಧ ಬಹು ಮಹತ್ವದ್ದಾಗುತ್ತದೆ. ಇಂತದ್ದು ’ಸಂರಚನಾವಾದ’ ದಲ್ಲಿ ಕಂಡು ಬರುವ ಪ್ರಮುಖವಾದ ಅಂಶಗಳು.
’ಸಂರಚನಾವಾದ’ ದ ಬಗ್ಗೆ ಸ್ಥೂಲವಾದ ಪರಿಚಯ, ಭಾಷಾಶಾಸ್ತ್ರ ಮತ್ತು ಮಾನವಶಾಸ್ತ್ರ, ಸಾಹಿತ್ಯದ ಸಂಚನೆಗಳು, ಸಂರಚನಾವಾದಿ ಅನ್ವಯಿಕ ವಿಮರ್ಶೆ, ಇವುಗಳ ಬಗ್ಗೆ ವಿಮರ್ಶಿಸುವ ಅಂಶಗಳು ’ಸಂರಚನಾವಾದ’ ಪುಸ್ತಕದಲ್ಲಿದೆ.
ಸಂರಚನಾವಾದ ಎನ್ನುವುದು ಸಾಹಿತ್ಯ ಮೀಮಾಂಸೆಯ ಪಂಥಗಳಲ್ಲಿ ಪ್ರಮುಖವಾದುದು. ಈ ಪಂಥವು ಅಂತರ್ಶಿಸ್ತೀಯ ದೃಷ್ಟಿಕೋನವನ್ನು ಮತ್ತು ಅತ್ಯಂತ ಸಂಕೀರ್ಣವಾದ ವಿವರಗಳನ್ನು ಒಳಗೊಂಡಿದೆ. ಡಾ. ಬಸವರಾಜ ನಾಯ್ಕರ ಇದರ ಲೇಖಕರಾಗಿದ್ದು ಸಾಹಿತಿ, ವಿಮರ್ಶಕ ಗಿರಡ್ಡಿ ಗೋವಿಂದರಾಜರ ಸಂಪಾದಕತ್ವದಲ್ಲಿ ಸಾಹಿತ್ಯ ಪಾರಿಭಾಷಿಕ ಮಾಲೆಯ ಸರಣಿಯಲ್ಲಿ ಪ್ರಕಟವಾದ ಕೃತಿ ’ಸಂರಚನವಾದ’.
©2024 Book Brahma Private Limited.