ಕಥನ ಕವನ

Author : ಎಚ್. ಎಸ್. ವೆಂಕಟೇಶಮೂರ್ತಿ

Pages 88

₹ 25.00




Year of Publication: 1990
Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: ಕರ್ನಾಟಕ ಸಾಹಿತ್ಯ ಅಕಾಡೆಮಿ, ನೃಪತುಂಗ ರಸ್ತೆ, ಬೆಂಗಳೂರು - 560001

Synopsys

ಸಾಹಿತಿ, ವಿಮರ್ಶಕ ಗಿರಡ್ಡಿ ಗೋವಿಂದರಾಜರ ಸಂಪಾದಕತ್ವದಲ್ಲಿ ಪ್ರಕಟವಾದ ’ಕಥನ ಕವನ’ ಕೃತಿಯು  ’ಸಾಹಿತ್ಯ ಪಾರಿಭಾಷಿಕ ಮಾಲೆ” ಸರಣಿಯ ಪುಸ್ತಕ.

ಲೇಖಕರೂ, ಖ್ಯಾತ ಕವಿ, ವಿಮರ್ಶಕರೂ ಆದ ಎಚ್. ಎಸ್, ವೆಂಕಟೇಶ್ ಮೂರ್ತಿಯವರ ’ಕಥನ ಕವನ’ ಕೃತಿಯ ಶೀರ್ಷಿಕೆಯೇ ತಿಳಿಸುವಂತೆ ’ಕಥನ’ ಮತ್ತು ’ಕವನ’ ಎಂಬ ಎರಡು ಅಂಶಗಳನ್ನು ಒಳಗೊಂಡಿದ್ದು, ಕವನ ಎಂಬುದು ಕಾವ್ಯಾತ್ಮಕತೆಯನ್ನೂ, ಪದ್ಯ ರೂಪವನ್ನೂ ಸೂಚಿಸುತ್ತದೆ. ಕಥನ  ಕವನವು ಮೂಲಭೂತವಾಗಿ ಪದ್ಯರಚನೆಯಾಗಿದೆ. ಕವಿಯು ತನ್ನ ಭಾವನೆ, ಕಲ್ಪನೆ, ಅನುಭವ, ವಿಚಾರಗಳನ್ನು ಆತ್ಮನಿಷ್ಠ ನೆಲೆಯಲ್ಲಿ ನಿರೂಪಿಸುತ್ತಾನೆ. ಕಥನ ಎನ್ನುವುದು ಕಥೆಯ ಚಲನಶೀಲತೆಯನ್ನು ಸೂಚಿಸುತ್ತದೆ.  ಪದ್ಯರೂಪ ಅಥವಾ ಕಥನ ಧಾಟಿಯಲ್ಲಿ , ಕಥೆ ಮತ್ತು ಆಕರ್ಷಕವಾದ ಪಾತ್ರಗಳನ್ನು ಬಳಸಿ, ಜೀವನ ವಿನ್ಯಾಸವೊಂದನ್ನು ಭಾವತೀವ್ರತೆಯಲ್ಲಿ ನಿರೂಪಿಸಲಾಗುವ ಕಾವ್ಯಾತ್ಮಕ ಅಭಿವ್ಯಕ್ತಿ ಕಥನಕವನ ಎನಿಸಿಕೊಳ್ಳುತ್ತದೆ.

ಕಥನಕವನದ ವಿವಿಧ ರೂಪ,ಅವುಗಳಲ್ಲಿ ಕಂಡು ಬಂದ ಮಹಾಕಾವ್ಯ, ಖಂಡಕಾವ್ಯ, ಖಂಡಕಥಾ, ಬ್ಯಾಲಡ್ (ಲಾವಣಿ ಪದ) ಮುಂತಾದವುಗಳ ಪರಿಚಯ, ಇಂಗ್ಲಿಷ್ ಸಾಹಿತ್ಯದಲ್ಲಿ ಕಥನಕವನಗಳು, ಕನ್ನಡ ಸಾಹಿತ್ಯದಲ್ಲಿ ಕಥನಕವನಗಳು, ಹೀಗೆ ಅನೇಕ ವಿಷಯಗಳೊಂದಿಗೆ ’ಕಥನ ಕವನ’ ಕೃತಿ ಉತ್ತಮ ಪರಾಮರ್ಶನ ಕೃತಿಯೂ ಆಗಿದೆ.

About the Author

ಎಚ್. ಎಸ್. ವೆಂಕಟೇಶಮೂರ್ತಿ
(23 June 1944)

ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...

READ MORE

Related Books