ಅಸ್ತಿತ್ವವಾದ- ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾದ ಸಾಹಿತ್ಯ ಪಾರಿಭಾಷಿಕ ಪುಸ್ತಕ ಮಾಲೆಯ ಭಾಗವಾಗಿ ಪ್ರಕಟವಾದ ಕೃತಿ. ಜಾನ್. ಡಿ. ಜಂಪ್ ಅವರ ಸಂಪಾದಕತ್ವದಲ್ಲಿ ಮೆಥುಯಿನ್ ಪ್ರಕಾಶನದವರು ಇಂಗ್ಲೀಷಿನಲ್ಲಿ ಹೊರತರುತ್ತಿದ್ದ ಕ್ರಿಟಿಕಲ್ ಈಡಿಯಂ ಮಾಲೆಯ ಪುಸ್ತಕಗಳಿಂದ ಪ್ರೇರಣೆಗೊಂಡ ಯೋಜನೆ ಸಾಹಿತ್ಯ ಪಾರಿಭಾಷಿಕ ಪುಸ್ತಕ ಮಾಲೆ. ಈ ಯೋಜನೆಯಲ್ಲಿ ಇಪ್ಪತೈದು ಪುಸ್ತಕಗಳು ಪ್ರಕಟವಾದಿದ್ದು, ಎಲ್ಲ ಪುಸ್ತಕಗಳಿಗೂ ಕನ್ನಡ ಸಾಹಿತ್ಯವೇ ದೃಷ್ಟಿಕೋನದ ಕೇಂದ್ರ. ಅಕಾಡೆಮಿಯ ಕೋರಿಕೆಯ ಮೇರೆಗೆ ಕನ್ನಡ ಸಾಹಿತ್ಯ ಕ್ಷೇತ್ರದ ಶ್ರೇಷ್ಠ ವಿಮರ್ಶಕರಲ್ಲಿ ಒಬ್ಬರಾದ ಗಿರಡ್ಡಿ ಗೋವಿಂದರಾಜ ಅವರು ಈ ಮಾಲೆಯ ಸಂಪಾದಕತ್ವ ವಹಿಸಿಕೊಂಡಿದ್ದರು.ಅಸ್ತಿತ್ವವಾದ ಕೃತಿಯನ್ನು ಕವಿ, ವಿಮರ್ಶಕ ಶ್ರೀ.ಕೆ.ವಿ. ತಿರುಮಲೇಶ್ ರಚಿಸಿದ್ಧಾರೆ.
©2024 Book Brahma Private Limited.