ಕನ್ನಡ ನವೋದಯ ಸಾಹಿತ್ಯದ ಮೇಲೆ ಇಂಗ್ಲಿಷ್ ರೊಮ್ಯಾಂಟಿಕ್ ಕಾವ್ಯದ ಪ್ರಭಾವ ಐತಿಹಾಸಿಕ ಸಂಗತಿಯಾಗಿದೆ. ರೊಮ್ಯಾಂಟಿಕ್ ಆಂದೋಲನದ ಹಿನ್ನೆಲೆಯನ್ನು ಚರ್ಚಿಸುತ್ತಾ ಜರ್ಮನ್ ಸಾಹಿತ್ಯದ ಪ್ರಭಾವ, ವ್ಯಕ್ತಿ ಮತ್ತು ಸಮಾಜಗಳ ನಡುವಿನ ಸಾಂಸ್ಕೃತಿಕ ಸಂಘರ್ಷಗಳನ್ನು ಕುರಿತು ’ನವ್ಯತೆ’ ಕೃತಿ ಪ್ರಸ್ತಾಪಿಸುತ್ತದೆ.
ಪ್ರತಿಭೆ ಮತ್ತು ಸಾಮುದಾಯಿಕ ಬುದ್ಧಿವಂತಿಕೆಯ ನಡುವೆ ಸಂಘರ್ಷ ಅನಿವಾರ್ಯವಾದ ಹಿನ್ನೆಲೆ, ಇವುಗಳ ಬಗ್ಗೆ, ವರ್ಡ್ಸ್ ವರ್ಥ್, ಮತ್ತು ಕೊಲ್ ರಿಜ್ ಕವಿಗಳ ಸಾಹಿತ್ಯ ರಚನೆ ಮತ್ತು ಪ್ರಭಾವ, ಕವಿಪ್ರತಿಭೆ ಮತ್ತು ಸೃಜನಶಕ್ತಿಯ ಬಗ್ಗೆ ವಿವರಣೆ, ರೊಮ್ಯಾಂಟಿಸಿಜಮ್ ಸಾಹಿತ್ಯ ಶಕ್ತಿ ಮತ್ತು ದೌರ್ಬಲ್ಯಗಳ ಬಗ್ಗೆಇರುವ ಅಂಶವನ್ನು ಸಾಹಿತ್ಯಿಕ ಹಿನ್ನೆಲೆಯಲ್ಲಿ ಕಂಡುಕೊಳ್ಳುವ ಮಾರ್ಗವಾಗಿ ನವ್ಯತೆ ಪರಿಚಯಿಸುತ್ತದೆ.
ಕನ್ನಡ ನವೋದಯ ಸಾಹಿತ್ಯದ ಮೇಲೆ ರೊಮ್ಯಾಂಟಿಸಿಜಮ್ ಸಾಹಿತ್ಯ ಪ್ರಭಾವ ಇವೆಲ್ಲವುಗಳ ದೀರ್ಘ ವಿವರಣೆ, ಮಾಹಿತಿಪೂರ್ಣ ಪರಾಮರ್ಶನ ಕೃತಿಯಾಗಿ ’ ನವ್ಯತೆ’ ಪುಸ್ತಕವನ್ನು ಕವಿ, ನಾಟಕಕಾರ, ವಿಮರ್ಶಕ, ಅನುವಾದಕ, ಅಂಕಣಕಾರರಾದ ಕೀರ್ತಿನಾಥ ಕುರ್ತಕೋಟಿಯವರು ಹೊರತಂದಿದ್ದಾರೆ.
©2025 Book Brahma Private Limited.