ಲೇಖಕ ಎಚ್. ಎಸ್. ರಾಘವೇಂದ್ರರಾವ್ ಸಂಪಾದಿಸಿರುವ ’ಪಗತ್ರಿಶೀಲತೆ’ ಕೃತಿಯು ಕನ್ನಡ ಸಾಹಿತ್ಯದಲ್ಲಿನ ಪ್ರಗತಿಶೀಲತೆಯ ವಿಕಾಸ, ಪ್ರಗತಿಶೀಲ ಸಾಹಿತ್ಯ ಚಳವಳಿಯ ಪರಿಚಯಗಳನ್ನು ಸ್ಥೂಲವಾಗಿ ಪರಿಚಯಿಸುತ್ತದೆ.
ಕನ್ನಡ ಸಾಹಿತ್ಯದ ಮೊದಲ ದಿನಗಳಿಂದಲೂ ವಸ್ತು ಸ್ಥಿತಿಯನ್ನು ಕುರಿತ ಅಸಹನೆ ಮತ್ತು ಪರಿವರ್ತನೆಯನ್ನೂ ಕುರಿತ ಒಲವುಗಳು ಬೇರೆ ಬೇರೆ ನೆಲೆಯಲ್ಲಿ ವ್ಯಕ್ತವಾಗುತ್ತಲೇ ಬಂದಿವೆ. ಭಾರತೀಯ ಸಾಹಿತ್ಯಿಕ ಸನ್ನಿವೇಶದಲ್ಲಿ ಮತ್ತು ಅದಕ್ಕೆ ಹಿನ್ನೆಲೆಯಾಗಿ ಯುರೋಪಿನಲ್ಲಿ ಜನಪರವಾದ ಸಾಹಿತ್ಯಿಕ ಚಳವಳಿಗಳು ಆಶಯ ಹಾಗೂ ಮಾಧ್ಯಮವನ್ನು ಕುರಿತಂತೆ ತಳೆದಿರುವ ನಿಲುವುಗಳ ಸ್ಥೂಲ ಗ್ರಹಿಕೆಗಳ ಬಗ್ಗೆ ಕುರಿತು ಚರ್ಚಿಸುವ ಅನೇಕ ಅಂಶಗಳು ’ಪ್ರಗತಿಶೀಲತೆ’ಯಲ್ಲಿ ಕಾಣಬಹುದು.
ಪ್ರಗತಿಯ ಅರ್ಥ ಮತ್ತು ಸಾಧ್ಯತೆಗಳನ್ನು ಕುರಿತ ಚಿಂತನೆಯು ಸಾಮಾಜಿಕವಾದುದು. ಪ್ರಗತಿಯನ್ನು ಕುರಿತ ಈ ಬಗೆಯ ಆಲೋಚನೆಗಳು ಅದರ ಸಾಮಾಜಿಕ ಹಾಗೂ ವೈಯಕ್ತಿಕ ಆಯಾಮಗಳನ್ನು ಒಂದೆಡೆ ಪರಿಶೀಲಿಸುವುದರಿಂದ ಸಾಕಷ್ಟು ಮಹತ್ವಪೂರ್ಣ ಅಂಶಗಳ ಬಗ್ಗೆ ಈ ಪುಸ್ತಕದಲ್ಲಿ ಚರ್ಚಿಸಬಹುದಾಗಿದೆ.
©2025 Book Brahma Private Limited.