ಕನ್ನಡದ ವಿವಿಧ ಲೇಖಕರ ಸಹಕಾರದಿಂದ, ಸಿದ್ದವಾದ ’ಸಾಹಿತ್ಯ ಪಾರಿಭಾಷಿಕ ಮಾಲೆ’ಯ ಪುಸ್ತಕಗಳು ಸಾಹಿತಿ ಡಾ, ಗಿರಡ್ಡಿ ಗೋವಿಂದರಾಜ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿವೆ. ಭಾರತೀಯ ಹಾಗೂ ಪಾಶ್ಚಿಮಾತ್ಯ ಸಾಹಿತ್ಯ ಚಿಂತನೆ ಮತ್ತು ವಿಮರ್ಶೆಗಳ ಹಿನ್ನೆಲೆಯಲ್ಲಿ ಪ್ರಕಟವಾದ ಅನೇಕ ಪುಸ್ತಕಗಳಲ್ಲಿ ಲೇಖಕ, ವಿಮರ್ಶಕರಾದ ಡಾ, ಜಿ,ಎಸ್.ಆಮೂರ ’ ಕಾಮಿಡಿ’ ಪುಸ್ತಕವೂ ಪ್ರಮುಖವಾದದ್ದು.
’ಕಾಮಿಡಿ’ ಪದಕ್ಕೆ ಪರ್ಯಾಯವಾಗಿ ’ಪ್ರಹಸನ’ ಹಾಗೂ ’ಹರ್ಷನಾಟಕ’ ಗಳೆಂಬ ಎರಡು ಪದಗಳ ಬಳಕೆ ಕನ್ನಡದಲ್ಲಿದೆ. ಈ ಕೃತಿ ಮುಖ್ಯವಾಗಿ ಭಾರತೀಯ ಮತ್ತು ಪಾಶ್ಚಾತ್ಯ ಸಂದರ್ಭಗಳಲ್ಲಿ ಕಂಡು ಬಂದ ಕಾಮಿಡಿಯ ಸೈದ್ಧಾಂತಿಕ ಸ್ವರೂಪವನ್ನೂ, ಪಾಶ್ಚಾತ್ಯ ಪರಿಪ್ರೇಕ್ಷ್ಯದಲ್ಲಿ ಕಾಮಿಡಿ ಬೆಳೆದು ಬಂದ ರೀತಿಯನ್ನೂ, ಕಾಮಿಡಿ ಮತ್ತು ಕನ್ನಡ ನಾಟಕಗಳ ಸಂಬಂಧವನ್ನೂ ವಿವರವಾಗಿ ತಿಳಿಸುತ್ತದೆ.
ಕಾಮಿಡಿ ಮತ್ತು ಉಳಿದ ಸಾಹಿತ್ಯ ಪ್ರಕಾರಗಳ ಪರಿಚಯವನ್ನು ಕುರಿತು ಚರ್ಚಿಸುವ ’ಕಾಮಿಡಿ’ ಕೃತಿ ಸಂಸ್ಕೃತ ಸಾಹಿತ್ಯದಲ್ಲಿನ ಹಾಸ್ಯ ನಾಟಕ ರಚನೆಗಳ ಬಗ್ಗೆ ಪ್ರಸ್ತಾಪಿಸುತ್ತದೆ. ಇದರ ಹಿನ್ನೆಲೆಯಾಗಿಟ್ಟುಕೊಂಡು ಸಂಸ್ಕೃತ ನಾಟ್ಯ ಪರಂಪರೆಯನ್ನು ಕಾಮಿಡಿ ಪರಂಪರೆಯನ್ನಾಗಿ ಗಮನಿಸುವ ಅನೇಕ ಉದಾಹರಣೆಯನ್ನು ಲೇಖಕರು ಈ ಕೃತಿಯಲ್ಲಿ ನೀಡಿದ್ದಾರೆ.
©2024 Book Brahma Private Limited.