ಕನ್ನಡದ ಹಿರಿಯ ವಿದ್ವಾಂಸರಾದ ಡಾ, ಜಿ,ಎಸ್.ಆಮೂರ ಅವರು ’ಕಥನ ಶಾಸ್ತ್ರ’ ಪುಸ್ತಕವನ್ನು ರಚಿಸಿದ್ದಾರೆ. ’ ಕಥೆ’ ಎನ್ನುವುದರ ಹಿನ್ನೆಲೆ, ಬಳಕೆ, ಕಥಾ ಪ್ರಬಂಧ, ಕಥನಕ್ರಿಯೆ ಮತ್ತು ಕಾಲ, ಪಾತ್ರಗಳು,ಕಥನಕ್ರಿಯೆಯ ಕೇಂದ್ರೀಕರಣ, ಕಥನದ ಸ್ತರಗಳು ಹಾಗೂ ಕಥನಕಾರರ ಶೈಲಿ, ಬಳಕೆ, ಭಾಷೆ, ಕಥಾ ಪ್ರಬಂಧ, ಕಲ್ಪನೆ ಇವುಗಳ ಸಂಕ್ಷಿಪ್ತ ಪರಿಚಯ, ವಿಮರ್ಶಾತ್ಮಕ ಚರ್ಚೆ, ಬರಹಗಳು ’ಕಥನ ಶಾಸ್ತ್ರ’ ದಲ್ಲಿವೆ.
ಕಥನ ಶಾಸ್ತ್ರ ಎಷ್ಟೇ ವೈಜ್ಞಾನಿಕವಾದರೂ ಅಸು ಕಾದಂಬರಿಯೊಂದರ ಸಂಪೂರ್ಣ ಮೀಮಾಂಸೆಯಾಗಲು ಸಾಧ್ಯವಿಲ್ಲ. ಆದರೆ ಕಾದಂಬರಿ ಕಥನದ ಒಂದು ರೂಪವಾದುದರಿಂದ ಅದು ಇಂಥ ಮೀಮಾಂಸೆಗೆ ಭದ್ರವಾದ ತಳಹದಿಯನ್ನು ನೀಡುತ್ತವೆ. ಕಥಾ ಪ್ರಬಂಧಗಳನ್ನು ಕಥನ ಶಾಸ್ತ್ರಜ್ಞರು ವಿಂಗಡಿಸಿರುವ ಬಗೆ, ವ್ಯಾಖ್ಯಾನ ಸಹಿತ ವಿವರಣೆಗಳನ್ನು ’ಕಥನ ಶಾಸ್ತ್ರ’ ಒಳಗೊಂಡಿದೆ.
©2025 Book Brahma Private Limited.