’ನವ್ಯತೆ’ ಎನ್ನುವುದು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಒಂದು ನಿರ್ದಿಷ್ಟ ಸಾಹಿತ್ಯ ಮಾರ್ಗವನ್ನು ಸೂಚಿಸುವ, ನಿರ್ದೇಶಿಸುವ ಪರಿಕಲ್ಪನೆಯಾಗಿ ಬಳಕೆಯಲ್ಲಿದೆ.
ನವ್ಯತೆಯ ಪರಿಕಲ್ಪನೆ ಬೆಳೆದ ರೀತಿ, ಅದರ ಹಿನ್ನೆಲೆ, ಬಳಕೆ, ಕಾವ್ಯಮಾರ್ಗದಲ್ಲಿನ ನವ್ಯತೆ, ಪಾಶ್ಚಾತ್ಯ ಸಾಹಿತ್ಯದಲ್ಲಿ ನವ್ಯತೆ ಕಂಡು ಬಂದ ಬಗೆ, ಸಾಹಿತಿ ವಿ.ಕೃ.ಗೋಕಾಕ್ ಅವರ ಮಾರ್ಗದಲ್ಲಿನ ಕನ್ನಡ ಸಾಹಿತ್ಯದಲ್ಲಿ ನವ್ಯತೆಯನ್ನು ಪರಿಚಯಿಸಿರುವ ರೀತಿ, ಗೋಪಾಲಕೃಷ್ಣ ಅಡಿಗರ ನವ್ಯಮಾರ್ಗದ ವೈಶಿಷ್ಟ್ಯ,ಗಳ ಬಗ್ಗೆ ಸಂಕ್ಷಿಪ್ತವಾಗಿ ಈ ಪುಸ್ತಕ ತಿಳಿಸುತ್ತದೆ.
ನವ್ಯ ಸಾಹಿತ್ಯದ ಪ್ರಮುಖ ಲಕ್ಷಣಗಳು, ನವ್ಯಮಾರ್ಗದಲ್ಲಿ ಕಂಡು ಬಂದ ಪ್ರಮುಖ ಲೇಖಕರು ಮತ್ತು ಅವರ ರಚನೆಗಳ ಬಗ್ಗೆ ಪ್ರಸ್ತಾಪಿಸುವ ಕೃತಿ ’ನವ್ಯತೆ’. ’ಸಾಹಿತ್ಯ ಪಾರಿಭಾಷಿಕ ಮಾಲೆ’ಯಡಿ ಪ್ರಕಟಗೊಂಡಿರುವ ’ನವ್ಯತೆ’ ಪುಸ್ತಕವು ಲೇಖಕ, ವಿಮರ್ಶಕರಾದ ನರಹಳ್ಳಿ ಬಾಲಸುಬ್ರಹ್ಮಣ್ಯ ಸಾಹಿತ್ಯ ರಚನೆಯಲ್ಲಿ ಪುಸ್ತಕ ರೂಪ ಪಡೆದುಕೊಂಡಿದೆ.
©2024 Book Brahma Private Limited.