ಮಾತಿನ ಕಲೆ ತಾಳಮದ್ದಳೆ ಶ್ರೀಧರ ಡಿಎಸ್ ಅವರ ಕೃತಿಯಾಗಿದೆ.ಆಶು ಮಾತನ್ನು ಅವಲಂಬಿಸಿದ ಜಗತ್ತಿನ ಏಕೈಕ ಕಲಾಪ್ರಕಾರವಾದರೂ ತಾಳಮದ್ದಲೆಯ ಕುರಿತು ಬಂದಿರುವ ಕೃತಿಗಳು ಕಡಿಮೆ. ಯಕ್ಷಗಾನರಂಗದಲ್ಲಿ ಹಲವು ದಶಕಗಳಿಂದ ಗುರುತಿಸಿಕೊಂಡಿರುವ, ಸ್ವತಃ ಒಳ್ಳೆಯ ಅರ್ಥಧಾರಿಗಳಾಗಿದ್ದು ತಾಳಮದ್ದಲೆಗಾಗಿ ಮೀಸಲಾದ ಸಂಘಟನೆ ನಡೆಸುತ್ತಿರುವ ಶ್ರೀಧರ ಡಿ. ಎಸ್. ಈ ಕಲಾಪ್ರಕಾರದ ಸಮಗ್ರ ಚಿತ್ರಣ ಕೊಡುವ ಕೃತಿಯನ್ನು ರಚಿಸಿದ್ದಾರೆ. ಪ್ರಸಂಗ ರಚನೆ, ಅರ್ಥಧಾರಿಗೆ ಇರಬೇಕಾದ ಸಂಸ್ಕಾರ ಮತ್ತು ಸಿದ್ಧತೆ, ಭಾಗವತಿಕೆಯ ಮಹತ್ವ ಮತ್ತು ಔಚಿತ್ಯ, ತಾಳ-ಮದ್ದಲೆಗಳ ಸಹಯೋಗ, ಪ್ರೇಕ್ಷಕವರ್ಗ, ಸಂಘಟನೆ-ಸಂಯೋಜನೆಗಳ ಸವಾಲುಗಳು, ಯಕ್ಷಗಾನ ಹಾಗೂ ತಾಳಮದ್ದಲೆಯ ನಡುವಿನ ಕೊಡುಕೊಳ್ಳುವಿಕೆ ಹೀಗೆ ತಾಳಮದ್ದಲೆಯ ಸುತ್ತಮುತ್ತಲಿನ ಎಲ್ಲ ವಿಚಾರಗಳನ್ನೂ ಭಾವಾತಿರೇಕವಿಲ್ಲದೆ ಅತ್ಯಂತ ಸಂಯಮದಿಂದ ಚರ್ಚಿಸುವ ಪ್ರಬುದ್ಧತೆಯನ್ನು ಈ ಕೃತಿಯಲ್ಲಿ ಕಾಣಬಹುದು.
©2024 Book Brahma Private Limited.