ಶ್ರೀ ಸಮರ್ಥ ರಾಮದಾಸ ಸ್ವಾಮಿಗಳು ವಿರಚಿತ ಮನಾಚೆ ಶ್ಲೋಕಗಳನ್ನು (205 ಭಕ್ತಿ ವಚನಗಳ ಅನುವಾದ) ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ ಕೃತಿ-ಮನಃಸಾಕ್ಷಿ. ಶ್ರೀ ರಾಮದಾಸರು ಛತ್ರಪತಿ ಶಿವಾಜಿ ಮಹಾರಾಜರ ಗುರುಗಳಾಗಿದ್ದರು. ಇವರು ಮರಾಠಿಯಲ್ಲಿ ದಾಸಬೋಧ , ಮನಾಚೆ ಶ್ಲೋಕ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದು, ‘ಮನಾಚೇ ಶ್ಲೋಕ’ವೂ ಒಂದು. ಭಕ್ತಿ ವಚನಗಳ ಜೊತೆಗೆ ಕೃಪಾಷ್ಟಕಗಳು ಎಂಬ 8 ಪದ್ಯಗಳಿವೆ. ಮನಸ್ಸನ್ನು ಸಂಭೋದಿಸಿ ಹೇಳಿದ ಈ ಶ್ಲೋಕಗಳು ಮಾನವೀಯತೆ ದರ್ಶಿಸುವುದಲ್ಲದೆ ಮನಸ್ಸಿಗೆ ಸಮೃದ್ಧಿಯನ್ನು ತಂದುಕೊಡುತ್ತವೆ ಎಂಬುದು ಸಾಹಿತ್ಯಾಸಕ್ತರ ನೆಮ್ಮದಿ. ಕೃತಿಯಲ್ಲಿ ಲೇಖಕರ ಸ್ವರಚಿತ ಕವನಗಳನ್ನೂ ಸಂಕಲಿಸಲಾಗಿದೆ.
©2024 Book Brahma Private Limited.