ಹಿರಿಯ ಲೇಖಕ ಹಾರಗದ್ದೆ ಸತ್ಯನಾರಾಯಣ ಅವರು ಅನುವಾದಿಸಿದ ಕೃತಿ-ಧರ್ಮ-ಸಂಸ್ಕೃತಿಯ ದರ್ಪಣ. ತಮಿಳು ಭಾಷೆಯ ತಿರುಕ್ಕುರುಳ್ ಗ್ರಂಥದ ಕನ್ನಡಾನುವಾದವಿದು. ತಮಿಳಿನ ತಿರುಕ್ಕುರುಳ್ ಒಬ್ಬ ತತ್ವಜ್ಞಾನಿ. ಬದುಕಿನ ನಶ್ಚರತೆಯನ್ನು ಪ್ರತಿಪಾದಿಸಿದ ವೈರಾಗ್ಯಮೂರ್ತಿ. ಅತಿ ಆಸೆಯೇ ದುಃಖಕ್ಕೆ ಕಾರಣ ಎಂಬುದೂ ಸಹ ಈತನ ತತ್ವಜ್ಞಾನ. ಸರಳ ಬದುಕು ಆರೋಗ್ಯಕರ ಮನಸ್ಸಿಗೆ ಪೂರಕ ಎಂಬುದು ಈತನ ವಿಚಾರದ ತಿರುಳು. ತಮಿಳು ಭಾಷೆಯ ಈತನ ವಿಚಾರಗಳನ್ನು ಕನ್ನಡಕ್ಕೆ ಅನುವಾದಿಸಿ, ಈ ವೈರಾಗ್ಯ ಮೂರ್ತಿಯ ವಿಚಾರಗಳನ್ನು ತಿಳಿಯಲು ಈ ಕೃತಿ ಸಹಾಯಕವಾಗಿದೆ.
©2025 Book Brahma Private Limited.