ಭರ್ತೃಹರಿಯ ಶೃಂಗಾರ ಶತಕ, ವೈರಾಗ್ಯ ಶತಕ ಹೀಗೆ ವಿವಿಧ ಶತಕಗಳ ಬಗ್ಗೆ ಬರೆದಿರುವ ಪಠ್ಯವನ್ನು ಬಸವಪ್ಪ ಶಾಸ್ತ್ರೀಗಳು ಇಲ್ಲಿ ಒಂದೆಡೆ ಪ್ರಕಾಶಿಸಿದ್ದೇ-‘ಕನ್ಭಡ ಭರ್ತೃಹರಿ ಸುಭಾಷಿತವು’ . ಭರ್ತೃ ಹರಿಯು ಈ ಶತಕಗಳನ್ನು ಸಂಸ್ಕೃತದಲ್ಲಿ ಬರೆದಿದ್ದು, ಇದನ್ನು ಕನ್ನಡೀಕರಿಸಲಾಗಿದೆ. ಕೃತಿ ಹಳೆಗನ್ನಡದಲ್ಲಿದೆ. ಕಠಿಣ ಶಬ್ದಗಳಿಗೆ ಹಾಗೂ ಪರಿಕಲ್ಪನೆಗಳಿಗೆ ಅರ್ಥ ವಿವರಣೆಯನ್ನೂ ಕೊಡಲಾಗಿದ್ದು, ಹಳೆಗನ್ನಡವೂ ಕಷ್ಟವಾಗುತ್ತಿದ್ದರೆ ಸರಳ ಕನ್ನಡದಲ್ಲಿ ಓದಬಹುದಾಗಿದೆ. ಅರ್ಥ ಪದ್ಧತಿ, ಪರೋಪಕಾರ ಪದ್ಧತಿ, ಧೈರ್ಯ ಪದ್ಧತಿ, ದೈವ ಪದ್ಧತಿ, ಕರ್ಮ ಪದ್ಧತಿ, ಋತು ವರ್ಣನೆ, ವೈರಾಗ್ಯ ಪ್ರಕರಣದಲ್ಲಿ ಭೋಗಾಸ್ಥಿರತ್ವ ವರ್ಣನೆ ಪ್ರಕರಣ ಹೀಗೆ ಭರ್ತೃಹರಿಯ ಶತಕಗಳ ಸಮಗ್ರ ಪಠ್ಯ ಸಂಗ್ರಹದ ಅನುವಾದವು ಅರ್ಥಸಹಿತ ಸರಳ ಕನ್ನಡದಲ್ಲಿದೆ.
©2025 Book Brahma Private Limited.