ರಮಣಮಹರ್ಷಿ ಅವರ ಪ್ರಮುಖವಾದ ಉಪದೇಶಗಳು ಇಲ್ಲಿವೆ. ಅವರವೇ ಆದ ಮಾತುಗಳನ್ನು ಸ್ವಾಮಿ ರಾಜೇಶ್ವರಾನಂದ ಅವರು ಸಂಗ್ರಹಿಸಿ ಇಲ್ಲಿ ಕೊಟ್ಟಿದ್ದಾರೆ. ನಿಜವಾದ ಅದ್ವೈತವನ್ನು, ಜೀವನ್ಮುಕ್ತಿ ಅಥವಾ ವಿದೇಹ ಮುಕ್ತಿಯನ್ನು ಸಾಧಿಸಬೇಕಾದರೆ ನಾವು ಸ್ವಾರ್ಥಪರವಾದ ಅಹಂಅನ್ನು ವರ್ಜಿಸಿ ಸೋಹಂ (ಅವನೇ ನಾನು) ಎಂಬ ಭಾವಕ್ಕೆ ಏರಬೇಕು, ಜ್ಞಾನ, ಜ್ಞೇಯ ಮತ್ತು ಜ್ಞಾತೃಗಳ ಐಕ್ಯತೆಯನ್ನು ಸಾಧಿಸಬೇಕು ಎಂಬುದನ್ನು ಇಲ್ಲಿ ಸರಳವಾಗಿ ರಮಣರು ಬೋಧಿಸಿದ್ದಾರೆ.
©2025 Book Brahma Private Limited.