ಜಿ.ಪಿ. ರಾಜರತ್ನಂ ಅವರ ಕೃತಿ-ಧಮ್ಮಪದ. ಧಮ್ಮಪದ ತ್ರಿಪಿಟಕಗಳಲ್ಲೊಂದಾದ ಸುತ್ತಪಿಟಕದಲ್ಲಿನ ಬುದ್ಧಕ ನಿಕಾಯಕ್ಕೆ ಸೇರಿದ ಭಾಗ. ಬುದ್ಧ ತೋರಿಸಿದ ಧರ್ಮದ ಮಾರ್ಗವನ್ನು 423 ಪದ್ಯಗಳಿದ್ದು ಸ್ಫುಟಪಡಿಸುತ್ತದೆ. ಧಮ್ಮಪದ ಬೌದ್ಧಸಾಹಿತ್ಯದಲ್ಲಿ ಅತಿ ಪ್ರಸಿದ್ಧವಾದ ಗ್ರಂಥ. ಯೂರೋಪಿನ ಬಹು ಭಾಷೆಗಳಲ್ಲಿ ಅನುವಾದಗೊಂಡಿದೆ. ಕನ್ನಡದಲ್ಲೂ ಕವಿ ಜಿ.ಪಿ. ರಾಜರತ್ನಂ ಅವರು ಅನುವಾದಿಸಿ, ಸಂಪಾದಿಸಿದ ಗ್ರಂಥವಿದು. ಇದರಲ್ಲಿ 26 ಅಧ್ಯಾಯಗಳಿವೆ. ಅವುಗಳಲ್ಲಿ ಪ್ರತಿಯೊಂದು ನಿರ್ದಿಷ್ಟವಾದ ಒಂದು ವಿಷಯವನ್ನು ಮಂಡಿಸುತ್ತದೆ.
©2025 Book Brahma Private Limited.