ಯಕ್ಷಗಾನರಂಗದಲ್ಲಿ ಹಲವು ದಶಕಗಳಿಂದ ಗುರುತಿಸಿಕೊಂಡಿರುವ ಶ್ರೀಧರ ಡಿ.ಎಸ್. ಅವರ ಕೃತಿ ʻಮಾತಿನ ಕಲೆ ತಾಳಮದ್ದಲೆʼ. ಯಕ್ಷಗಾನದಲ್ಲಿ ಬರುವ ತಾಳಮದ್ದಲೆ ಎನ್ನುವ ಕಲಾಪ್ರಕಾರದ ಸಮಗ್ರ ಚಿತ್ರಣವನ್ನು ಪ್ರಸ್ತುತ ಪುಸ್ತಕ ನೀಡುತ್ತದೆ. ತಾಳಮದ್ದಲೆಯ ಇತಿಹಾಸ, ವರ್ತಮಾನ, ಪ್ರಸಂಗ ರಚನೆ, ಅರ್ಥಧಾರಿಗೆ ಇರಬೇಕಾದ ಸಂಸ್ಕಾರ ಮತ್ತು ಸಿದ್ಧತೆ, ಭಾಗವತಿಕೆಯ ಮಹತ್ವ ಮತ್ತು ಔಚಿತ್ಯ, ತಾಳ-ಮದ್ದಲೆಗಳ ಸಹಯೋಗ, ಪ್ರೇಕ್ಷಕವರ್ಗ, ಸಂಘಟನೆ-ಸಂಯೋಜನೆಗಳ ಸವಾಲುಗಳು, ಯಕ್ಷಗಾನ ಹಾಗೂ ತಾಳಮದ್ದಲೆಯ ನಡುವಿನ ಕೊಡುಕೊಳ್ಳುವಿಕೆ, ಕಲಾವಿದರು ಹೀಗೆ ತಾಳಮದ್ದಲೆಯ ಸುತ್ತಮುತ್ತಲಿನ ಎಲ್ಲ ವಿಚಾರಗಳನ್ನೂ ಭಾವಾತಿರೇಕವಿಲ್ಲದೆ ಚರ್ಚಿಸಲಾಗಿದೆ.
©2024 Book Brahma Private Limited.