ಸಾಹಿತಿ, ವಿಮರ್ಶಕ ಗಿರಡ್ಡಿ ಗೋವಿಂದರಾಜರ ಸಂಪಾದಕತ್ವದಲ್ಲಿ ಪ್ರಕಟವಾದ ’ಕಥನ ಕವನ’ ಕೃತಿಯು ’ಸಾಹಿತ್ಯ ಪಾರಿಭಾಷಿಕ ಮಾಲೆ” ಸರಣಿಯ ಪುಸ್ತಕ.
ಲೇಖಕರೂ, ಖ್ಯಾತ ಕವಿ, ವಿಮರ್ಶಕರೂ ಆದ ಎಚ್. ಎಸ್, ವೆಂಕಟೇಶ್ ಮೂರ್ತಿಯವರ ’ಕಥನ ಕವನ’ ಕೃತಿಯ ಶೀರ್ಷಿಕೆಯೇ ತಿಳಿಸುವಂತೆ ’ಕಥನ’ ಮತ್ತು ’ಕವನ’ ಎಂಬ ಎರಡು ಅಂಶಗಳನ್ನು ಒಳಗೊಂಡಿದ್ದು, ಕವನ ಎಂಬುದು ಕಾವ್ಯಾತ್ಮಕತೆಯನ್ನೂ, ಪದ್ಯ ರೂಪವನ್ನೂ ಸೂಚಿಸುತ್ತದೆ. ಕಥನ ಕವನವು ಮೂಲಭೂತವಾಗಿ ಪದ್ಯರಚನೆಯಾಗಿದೆ. ಕವಿಯು ತನ್ನ ಭಾವನೆ, ಕಲ್ಪನೆ, ಅನುಭವ, ವಿಚಾರಗಳನ್ನು ಆತ್ಮನಿಷ್ಠ ನೆಲೆಯಲ್ಲಿ ನಿರೂಪಿಸುತ್ತಾನೆ. ಕಥನ ಎನ್ನುವುದು ಕಥೆಯ ಚಲನಶೀಲತೆಯನ್ನು ಸೂಚಿಸುತ್ತದೆ. ಪದ್ಯರೂಪ ಅಥವಾ ಕಥನ ಧಾಟಿಯಲ್ಲಿ , ಕಥೆ ಮತ್ತು ಆಕರ್ಷಕವಾದ ಪಾತ್ರಗಳನ್ನು ಬಳಸಿ, ಜೀವನ ವಿನ್ಯಾಸವೊಂದನ್ನು ಭಾವತೀವ್ರತೆಯಲ್ಲಿ ನಿರೂಪಿಸಲಾಗುವ ಕಾವ್ಯಾತ್ಮಕ ಅಭಿವ್ಯಕ್ತಿ ಕಥನಕವನ ಎನಿಸಿಕೊಳ್ಳುತ್ತದೆ.
ಕಥನಕವನದ ವಿವಿಧ ರೂಪ,ಅವುಗಳಲ್ಲಿ ಕಂಡು ಬಂದ ಮಹಾಕಾವ್ಯ, ಖಂಡಕಾವ್ಯ, ಖಂಡಕಥಾ, ಬ್ಯಾಲಡ್ (ಲಾವಣಿ ಪದ) ಮುಂತಾದವುಗಳ ಪರಿಚಯ, ಇಂಗ್ಲಿಷ್ ಸಾಹಿತ್ಯದಲ್ಲಿ ಕಥನಕವನಗಳು, ಕನ್ನಡ ಸಾಹಿತ್ಯದಲ್ಲಿ ಕಥನಕವನಗಳು, ಹೀಗೆ ಅನೇಕ ವಿಷಯಗಳೊಂದಿಗೆ ’ಕಥನ ಕವನ’ ಕೃತಿ ಉತ್ತಮ ಪರಾಮರ್ಶನ ಕೃತಿಯೂ ಆಗಿದೆ.
©2024 Book Brahma Private Limited.