ಈ ಸಂಕಲನದಲ್ಲಿ ಒಟ್ಟು 21 ಕತೆಗಳಿವೆ. ಇಲ್ಲಿನ ಕಥೆಗಳಲ್ಲಿ ಪ್ರಮುಖವಾಗಿ ಕಂಡುಬರುವುದು ಕುಟುಂಬದ ಆವರಣದಲ್ಲಿ ನಡೆಯುವ ವಿದ್ಯಮಾನಗಳನ್ನು ಕಥಾಹಂದರದಲ್ಲಿ ವಿಸ್ತರಿಸುವ ಕುಸುರಿ ಕಲೆ. ಹೆಣ್ಣು ಇಲ್ಲಿನ ಹೆಚ್ಚಿನ ಕಥೆಗಳ ಪ್ರಮುಖ ಪಾತ್ರ. ತನಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಆಕೆ ಸಿಡಿದು ನಿಲ್ಲುತ್ತಾಳೆ ಹಾಗು ನ್ಯಾಯ ಪಡೆಯುತ್ತಾಳೆ. ಪರಿಸ್ಥಿತಿಯನ್ನು ಎದುರಿಸಿ ಬದುಕುವ ಛಲವನ್ನು ಪ್ರದರ್ಶಿಸುತ್ತವೆ. ಈ ಮೂಲಕ ಸ್ತ್ರೀ ಸಬಲೀಕರಣಕ್ಕೆ ಸೂಕ್ತವಾದ ವಿವರಗಳನ್ನು ಇಲ್ಲಿರುವ ಕಥೆಗಳು ವಿವರಿಸುತ್ತದೆ. ಈ ಎಲ್ಲ ಕತೆಗಳೂ ಕನ್ನಡದ ಪ್ರಮುಖ ಪತ್ರಕೆಗಳಾದ ಸುಧಾ, ತರಂಗ, ಕರ್ಮವೀರ, ಮಯೂರ, ಮಲ್ಲಿಗೆ, ಲೋಕದರ್ಶನ, ಸಂಯುಕ್ತ ಕರ್ನಾಟಕ, ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
©2024 Book Brahma Private Limited.