ಗ್ರಾಮೀಣ ಬದುಕಿನ ಜೀವನವನ್ನು, ಅವರ ಸಂಕಟಗಳನ್ನು ಆಪ್ತವಾಗಿ ಹಿಡಿದಿಡುವ ಕಥಾ ಸಂಕಲನ ಇದು. ಶ್ರಮಿಕರ ಜೀವನ ಹಸನಾಗಿಸುವುದು ಎಂಬುದನ್ನು ಮನೋಜ್ಞವಾಗಿ ಕಟ್ಟಿಕೊಡಲಾಗಿದೆ.
ಪುಸ್ತಕದ ಕುರಿತು ಒಂದೆಡೆ ಮಾತನಾಡಿರುವ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ’ಕರ್ನಾಟಕದಲ್ಲಿ ನಡೆದ ಚಳವಳಿಯ ಕಥಾನಕಗಳೇ ಕೃತಿಯಲ್ಲಿವೆ ಅನ್ನಿಸುತ್ತದೆ. ಮಹಿಳೆ, ರೈತ, ಯುವಜನ, ವಿದ್ಯಾರ್ಥಿಗಳ ಬಗ್ಗೆ ಬರಹಗಳು ಬರುತ್ತಿವೆ ಎಂದರೆ ಅದಕ್ಕೆ ಚಳವಳಿಗಳೇ ಕಾರಣ. ಪ್ರಗತಿಪರ, ಚಲನಶೀಲ ನೆಲೆಯಲ್ಲಿ ಗ್ರಾಮೀಣ ಬದುಕನ್ನು ಕಟ್ಟಿಕೊಡುವ ಮೂಲಕ ಚಳವಳಿ ನಿರಂತರ ಎಂಬುದನ್ನು ಕೃತಿಕಾರರು ದಾಖಲಿಸಿದ್ದಾರೆ’ ಎಂದಿದ್ದಾರೆ.
ಚಳವಳಿಗಳ ಮೂಲಕ ಜನಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಯತ್ನಿಸುವವರು ಓದಲೇಬೇಕಾದ ಕತೆಗಳು ಇಲ್ಲಿಯವು.
©2025 Book Brahma Private Limited.