ನವ್ಯ ಚಳವಳಿಯ ಜೊತೆಗೆ ಕಾಣಿಸಿಕೊಂಡ ಅಸಂಗತವಾದ ಅನೇಕ ಕೃತಿಗಳನ್ನು, ಸಾಹಿತಿಗಳನ್ನು ಸೃಷ್ಟಿಸಿತು. ಸುಮತೀಂದ್ರ ನಾಡಿಗರಿಂದ ಹಿಡಿದು ಶಾಂತರಾಮ ಸೋಮಯಾಜಿಯವರೆಗೆ ಅನೇಕ ಬರಹಾಗರರು ಅಸಂಗತದ ಪಡಿಯಚ್ಚಿನಲ್ಲಿ ಮೂಡಿಬಂದರು.
ಕಿನಾರರ ಕತೆಗಳು ಕೂಡ ಅದೇ ಪರಂಪರೆಯ ಮುಂದುವರಿದ ಭಾಗದಂತಿವೆ. ಆದರೆ ಅದನ್ನು ಮೀರಿದ ಮತ್ತೊಂದು ಅಭಿವ್ಯಕ್ತಿಯೂ ಈ ಕತೆಗಳಿಂದ ಸಾಧ್ಯವಾಗಿದೆ ಎಂಬ ಅಭಿಪ್ರಾಯ ವಿಮರ್ಶಕರಿಂದ ವ್ಯಕ್ತವಾಗಿದೆ.
ಇಲ್ಲಿನ ನಾನೆಂಬೋದು ನಾನಲ್ಲ, ಟೋಪಿ ಆಟ, ಅವತಾರ, ಹೂವೊಳು ಹಾವೇ, ಪಾತ್ರದಂತಹ ಕೃತಿಗಳಲ್ಲಿ ಬರಹಗಾರ ಓದುಗರಿಗೆ ತಾನಂದುಕೊಂಡದ್ದನ್ನು ವಿಶಿಷ್ಟ ರೀತಿಯಲ್ಲಿ ದಾಟಿಸಿಬಿಡುತ್ತಾನೆ. ಅದು ಇಲ್ಲಿನ ಕತೆಗಾರನ ಶಕ್ತಿ ಕೂಡ.
©2025 Book Brahma Private Limited.