ಇಲ್ಲಿ ಒಟ್ಟು 18 ಕತೆಗಳಿವೆ. ಈಗಷ್ಟೇ ಕತಾ ಲೋಕಕ್ಕೆ ತೆರೆದುಕೊಂಡ ಮನಸ್ಸಿನ ಮುಗ್ಧತೆ ಪ್ರತೀ ಕತೆಗಳಲ್ಲೂ ಎದ್ದು ಕಾಣುತ್ತದೆ. ಜೀವಪರತೆ ಆತ್ಮೀಯವಾಗುತ್ತದೆ. ಲೇಖಕರು ಆಯ್ದುಕೊಳ್ಳುವ ವಸ್ತುಗಳಲ್ಲಿ ಇನ್ನಷ್ಟು ಅನುಭವವನ್ನು, ತೀವ್ರತೆಯನ್ನು ಬೇಡುತ್ತವೆಯಾದರೂ, ಕತೆಗಾರನ ಕತೆ ಹೇಳುವ ಅವಸರ ಕೆಲವೊಮ್ಮೆ ಕತೆಯ ಆತ್ಮಕ್ಕೆ ಧಕ್ಕೆ ತರುತ್ತದೆ. ಒಂದು ಹೆಣ್ಣಿನ ಬದುಕು ತಾಯ್ತನದಲ್ಲೇ ಅರ್ಥಪೂರ್ಣ ವಾಗುತ್ತದೆ ಎನ್ನುವ ಸಮಾಜಕ್ಕೆ ಸವಾಲೊಡ್ಡುವಂತ, ಮಕ್ಕಳಿಲ್ಲದ ತಾಯಿಯೊಬ್ಬಳು ಶಾಲೆಯೊಂದನ್ನು ತರದು ನೂರಾರು ಮಕ್ಕಳಿಗೆ ಅಮ್ಮನಾಗುವ ಬಗೆ ಅತ್ಯಂತ ಸುಧಾರಣ ಮನಸ್ಸಿನಿಂದ ಹೊರಹೊಮ್ಮಿದ ಕತೆ. ಮನುಷ್ಯ ಮತ್ತು ಪ್ರಾಣಿಯ ನಡುವಿನ ಸಂಬಂಧವನ್ನು ಹೇಳುವ ಇನ್ನೊಂದು ಸರಳ ಕತೆ “ಬೆಕ್ಕು'. ಇಂದಿನ ರಾಜಕೀಯ, ಕೋಮುಗಲಭೆಗಳ ನಡುವೆ ಶಾಂತಿಯ ಕನಸು ಕಾಣುವ ವಿಶ್ವ ಮತ್ತು ಆತನ ಮುಂದಿರುವ ವಾಸ್ತವವನ್ನು 'ವಿಶ್ವ ಕಂಡ ಕನಸು' ಕತೆ ಹೇಳುತ್ತದೆ.
©2025 Book Brahma Private Limited.