’ಮೀಸೆ ಮಾವ’ ಸಂಕಲನದಲ್ಲಿ ಏಳು ಕಥೆಗಳಿವೆ. ಸುದ್ದಿಮನೆಯಲ್ಲಿ ಸಾಮಾನ್ಯವಾಗಿ ವರದಿಯಾಗುವಂತಹ ಕೆಲವು ಸಾಮಾಜಿಕ ವಿಷಯಗಳು, ನಿತ್ಯದ ತವಕ ತಲ್ಲಣಗಳ ಕುರಿತು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ಧಾರೆ. ಸ್ವಂತದ್ದೊಂದು ವಿಳಾಸವಿಲ್ಲದೆ ಪಡಿತರ ಚೀಟಿ ಪಡೆಯಲಾಗದ ಹಾಗೂ ಪಡಿತರ ಚೀಟಿ ಇಲ್ಲದೆ ಅಸ್ತಿತ್ವದ ದ್ವಂದ್ವಕ್ಕೊಳಗಾಗುವ ಕುಟುಂಬವೊಂದರ ತೊಳಲಾಟ, ಮ್ಯಾನ್‌ಹೋಲ್ ಸ್ವಚ್ಛಗೊಳಿಸುವ ಪೌರಕಾರ್ಮಿಕರು ತಮ್ಮ ದೇಹಕ್ಕೆ ಅಂಟಿಕೊಳ್ಳುವ ವಾಸನೆಯಿಂದ ಕೌಟುಂಬಿಕವಾಗಿ ಎದುರಿಸುವ ತೊಂದರೆಗಳ ಕುರಿತು ಇಲ್ಲಿ ವಿವರಗಳನ್ನು ಒದಗಿಸಿದ್ದಾರೆ. ಬಡ್ತಿ ಪಡೆಯಲು ಕಾರ್ಪೊರೇಟ್ ಜಗತ್ತಿನಲ್ಲಿ ಸ್ನೇಹವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವ ನಾಜೂಕುತನ, ಗಂಡ ಹೆಂಡಿರ ಮನೋಲೋಕವನ್ನು ಹೇಗೆಲ್ಲಾ ಅಸ್ತವ್ಯಸ್ತಗೊಳಿಸುತ್ತದೆ ಎಂಬುದನ್ನು ಇಲ್ಲಿ ಚಿತ್ರಿಸಲಾಗಿದೆ.
©2025 Book Brahma Private Limited.