ಸಾಹಿತಿ ಪೂರೀಗಾಲಿ ಮರಡೇಶ ಮೂರ್ತಿ ಅವರು ಸಕ್ಕರೆ ಜಿಲ್ಲೆಯ ಗ್ರಾಮೀಣ ಪರಿಸರದಲ್ಲಿ ಜನಿಸಿದವರು. `ಸಾಕ್ಷಿಗುಡ್ಡ’ದ ಕಥೆಗಳು ಹಳ್ಳಿಪ್ರೀತಿಯ ಬದುಕಿನ ನೂರಾರು, ಸಾಕ್ಷಿಗಳನ್ನು ಸಾಂಕೇತಿಕವಾಗಿ ದಾಖಲಿಸಿವೆ. `ದ್ವಾಸಿ ಕೊಡ್ರಿ ದ್ವಾಸಿ’ ಕಥೆಯಲ್ಲಿ ಒಂದು ಸ್ನಿಗ್ಧಹಳ್ಳಿ ಚಿತ್ರಣವಿದೆ. `ದ್ಯಾವ್ರಕಥೆ’ಯು ನಾಗಾಲೋಟದ ಬದುಕಿನ ಆಯಾಮದೊಳಗೆ ತಂತಾನೆ ಬಿಚ್ಚಿಕೊಳ್ಳುತ್ತದೆ. `ಅಪ್ಪನ ಪ್ರೀತಿಯ ಅಂಗಿ’ ಕಥೆ ತನ್ನದೇ ಸಂಕೀರ್ಣತೆಯಲ್ಲಿ ಮೂಡಿ ಬಂದಿದ್ದರೂ ಸಹ ಬಾಂಧವ್ಯದ ತಂಗುದಾಣವಾಗುತ್ತದೆ. `ಕಥೆ ಹುಡುಕುತ್ತಾ’ ಕಥೆಯು ಬದುಕನ್ನು ಯಥಾವತ್ತು ತೆರೆದಿಡುವ ಒಂದು ಪ್ರೀತಿ ಮತ್ತು ಕಾಮದ ಕಥೆ. `ಬೆಟ್ಟದ ಹುಡುಗಿ’..... ಹೀಗೂ ಇರ್ತಾರಾ? ಎನ್ನುವ ಕೌತುಕದೊಂದಿಗೆ ಆರಂಭವಾಗುತ್ತದೆ. `ಇದು ಯಾರ ಹೊಲ’ ಗ್ರಾಮ್ಯ ಕಥಾ ಹಂದರ ಹೊತ್ತು ಸಾಗಿದರೂ ಹಳ್ಳಿ ಮನಸ್ಸುಗಳ ಪ್ರೀತಿಯನ್ನು ತೋರಿಸುತ್ತದೆ. `ಅವಳ ಸ್ವಗತ’ ಒಂದು ಹೆಣ್ಣಿನ ಆರ್ತಕಥನ! ಅವಳ ಒಳತೋಟಿಯ ನೋವುಗಳನ್ನು ಹೇಳಿಕೊಳ್ಳುವ ಒಂದು ಆತ್ಮಕಥನವಾಗಿ ತೆರೆದುಕೊಂಡಿದೆ. ಇನ್ನು `ಸಿದ್ಲಿಂಗಿ ಕಥೆ’ಯು ಒಬ್ಬ ಗಂಡುಬೀರಿ ಹುಡುಗಿಯೊಬ್ಬಳೊಳಗೆ ಅದೆಂತಹ ಜಾತ್ಯತೀತ ಭಾವನೆಗಳಿವೆ. `ಕಾಬ್ಲರ್ ನ ಭೂಮಿ’ ಕಥೆ ಒಬ್ಬ ಚಮ್ಮಾರನ ಭೂಮಿ ಕಥೆ.
©2025 Book Brahma Private Limited.