’ದಾವಿದ- ಕಿಮ್ಮೀರ ಯುದ್ಧ’ ಕೃತಿಯು ಬೈಬಲ್ಲಿನ ಹಳೆಯ ಒಡಂಬಡಿಕೆಯಲ್ಲಿ ಪ್ರಸ್ತಾಪವಾಗಿರುವ ದಾವಿದ ಗೊಲಿಯಾತರ ಹೋರಾಟದ ಬಯಲಾಟದ ರೂಪ. ರಾಯಚೂರು ಜಿಲ್ಲೆ ಆದಿ ಕ್ರೈಸ್ತರ ನೆಲ ಎಂದೇ ಪ್ರಸಿದ್ಧ. ಅಲ್ಲಿನ ಕೆಲವು ಜನಪದ ಕಲಾವಿದರು ಒಟ್ಟು ಸೇರಿ ರೂಪಿಸಿದ ಬಯಲಾಟ ಕಲೆ ಇದು. ದೂರದ ಯಹೂದಿಯರ ಕತೆಯೊಂದು ಕನ್ನಡಿಗರ ನಾಲಗೆಯಲ್ಲಿ ನಲಿದಾಡಿದ ಸಂಗತಿಯೂ ಹೌದು.
ಐವತ್ತು ಮತ್ತು ಎಪ್ಪತ್ತರ ದಶಕದಲ್ಲಿ ಪ್ರದರ್ಶನ ಕಂಡಿದ್ದ ಇದು ಮೊದಲು ಹಸ್ತಪ್ರತಿಯ ರೂಪದಲ್ಲಿತ್ತು. ಇಂತಹ ಅಪರೂಪದ ಜನಪದ ಕಲೆಯನ್ನು ಪ್ರಕಟಿಸುವ ಸಾಹಸ ಮಾಡಿರುವುದು ಹಿರಿಯ ಪತ್ರಕರ್ತರಾದ ಎಫ್ ಎಂ ನಂದಗಾವ್.
ಅವರಿಗೆ ಈ ಜನಪದ ಕಲೆಯ ಬಗ್ಗೆ ಕುತೂಹಲ ಕೆರಳಿದ್ದೇ ತಡ ನಾಡಿನ ಉದ್ದಗಲವಷ್ಟೇ ಅಲ್ಲದೆ ಆಂಧ್ರಪ್ರದೇಶ, ಕೇರಳದಲ್ಲಿಯೂ ಸಂಚರಿಸಿ ಅಮೂಲ್ಯ ಮಾಹಿತಿ ಕಲೆ ಹಾಕಿದರು. ಬಯಲಾಟದ ಬಂಧಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ಬೈಬಲ್ಲಿನ ಪ್ರಸಂಗವನ್ನು ರೂಪಿಸಿದರು. ಧಾರ್ಮಿಕ ಕಟ್ಟುಪಾಡುಗಳ ಹೊರತಾಗಿಯೂ ಜನಪದ ಕಲಾವಿದರು ಕೃತಿ ಹೊರಹೊಮ್ಮಲು ಶ್ರಮಿಸಿರುವುದು ಗಮನಾರ್ಹ.
©2025 Book Brahma Private Limited.