ಕುವೆಂಪು ಅವರ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ ಕಿಷ್ಕಿಂದಾ ಸಂಪುಟದಲ್ಲಿಯ ‘ಶಬರಿಗಾದನು ಅತಿಥಿ ದಾಶರಥಿ’ ಸಂಚಿಕೆಯ ಅನುವಾದ. ಕನ್ನಡ, ಹಿಂದಿ, ಇಂಗ್ಲಿಷ್ ಹಾಗೂ ಸಂಸ್ಕೃತದಲ್ಲೂ ಇದೇ ಸಂಚಿಕೆಯ ಅನುವಾದವನ್ನು ಲೇಖಕ ಶ್ರೀನಿವಾಸ ಕೃ. ದೇಸಾಯಿ ಅವರು ಸಂಕಲಿಸಿದ್ದಾರೆ.
ಮಹಾಕಾವ್ಯದ ಸಮಸ್ತ ಲಕ್ಷಣಗಳು ಸಮೃದ್ಧವಾಗಿ ಚಿತ್ರಿತವಾಗಿವೆ. ಲಕ್ಷ್ಮಣ- ಕಬಂಧರೊಡನೆ ಸಣ್ಣ ಯುದ್ಧವಿದೆ. ಪ್ರಕೃತಿ ವರ್ಣನೆ ತುಂಬಿದೆ, ವೇದನೆ-ದೌರ್ಬಲ್ಯಗಳಿವೆ, ದೈರ್ಯ ಉತ್ಸಾಹದ ಮಾತುಗಳಿವೆ. ಪ್ರಾರ್ಥನೆಯ ಧ್ವನಿಯಿದೆ. ದೇವರ ಸ್ವರೂಪದ ಚಿತ್ರವಿದೆ. ಬಾಯಲ್ಲಿ ಭೋಜನವಿದೆ, ಮನಮುಟ್ಟುವ ಸಂಭಾಷಣೆಗಳಿವೆ. ಮನುಷ್ಯ ಸ್ವಭಾವದ ದೌರ್ಬಲ್ಯತೆಯಿದೆ, ಪ್ರೇಮ-ಕರುಣೆಗಳ ಭಾವ ತುಂಬಿದೆ, ಉತ್ಕೃಷ್ಟ ಸೇವೆಯ ಸ್ಪರೂಪವಿದೆ. ಹೀಗೆ ಕುವೆಂಪು ಅವರ ಪೂರ್ಣ ದೃಷ್ಟಿಯು ಸಂಪೂರ್ಣವಾಗಿ ಸಿದ್ಧಿ ಪಡೆದ ಸಂಚಿಕೆ ಇದು.
©2024 Book Brahma Private Limited.