ಇಂಗ್ಲಿಷ್ ಸಾಹಿತ್ಯದ ಹೆಸರಾಂತ ಕವಿ ಜಾನ್ ಮಿಲ್ಟನ್ ಅವರ ಪ್ಯಾರಡೈಸ್ ಲಾಸ್ಟ್ ಮತ್ತು ಪ್ಯಾರಡೈಸ್ ರಿಗೇಯ್ನಡ್ ಎಂಬ ಮಹಾಕಾವ್ಯವನ್ನು ಕನ್ನಡಕ್ಕೆ ಅದೇ ಶೀರ್ಷಿಕೆಯಡಿ ಹಿರಿಯ ಲೇಖಕ ಪ್ರೊ. ಕೆ.ಎಂ. ಸೀತಾರಾಮಯ್ಯ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ ಇದು. 18ನೇ ಶತಮಾನದಲ್ಲಿ ಜಾನ್ ಮಿಲ್ಟನ್ ಪ್ಯಾರಡೈಸ್ ಲಾಸ್ಟ್ ಬರೆಯುವ ಮೂಲಕ ಇಂಗ್ಲಿಷ್ ಭಾಷೆಯ ಸಿರಿವಂತಿಕೆಯನ್ನು ಜಗತ್ತಿಗೆ ತೋರಿದ ಕವಿ ಎಂಬ ಪ್ರಶಂಸೆಗೆ ಪಾತ್ರನಾಗಿದ್ದ.. ಆದರೆ, 19ನೇ ಶತಮಾನದಲ್ಲಿ ಹಿರಿಯ ಕವಿಗಳು ಈತನನ್ನು ‘ಇಂಗ್ಲಿಷ್ ಕಾವ್ಯವವನ್ನು ತಪ್ಪು ದಾರಿಗೆ ಎಳೆದೊಯ್ದ ಕವಿ’ ಎಂದು ಟೀಕಿಸಿದರು. ಇಷ್ಟೆಲ್ಲದರ ಮಧ್ಯೆಯೂ ಜಾನ್ ಮಿಲ್ಟನ್ ತನ್ನ ಪ್ಯಾರಡೈಸ್ ಲಾಸ್ಟ್ ಮೂಲಕ ಇಂದಿಗೂ ಸಾಹಿತ್ಯ ವಲಯದಲ್ಲಿ ಜೀವಂತ ಕವಿಯೇ! ಆತನ ಈ ಕೃತಿಯ ಅನುವಾದ ಪರಿಣಾಮಕಾರಿಯಾಗಿದೆ.
©2025 Book Brahma Private Limited.