ಕುವೆಂಪು ಅವರ ಮಹಾಕಾವ್ಯ ’ಶ್ರೀರಾಮಾಯಣ ದರ್ಶನಂ’ ಸರಳ ರಗಳೆ ಛಂದಸ್ಸಿನಲ್ಲಿದೆ. ಕುವೆಂಪು ಅವರಿಗೆ ಖ್ಯಾತಿ-ಮನ್ನಣೆ ದೊರಕಿಸಿದ ಈ ಮಹಾಗ್ರಂಥದ ಸರಳ ಕನ್ನಡ ಗದ್ಯಾನುವಾದವನ್ನು ನಿ. ರಾಜಶೇಖರ ಅವರು ಮಾಡಿದ್ದಾರೆ. ಕಾವ್ಯರೂಪದಲ್ಲಿದ್ದ ಕಥನವನ್ನು ಗದ್ಯಕ್ಕೆ ವರ್ಗಾಯಿಸುವಲ್ಲಿ ಲೇಖಕರ ಶ್ರಮ ಎದ್ದು ಕಾಣಿಸುತ್ತದೆ. ಸರಳ ಗದ್ಯದಲ್ಲಿ ಕುವೆಂಪು ರಾಮಾಯಣ ಅರಿಯ ಬಯಸುವವರಿಗೆ ಉಪಯುಕ್ತ ಗ್ರಂಥ.
©2024 Book Brahma Private Limited.