ಪ್ರೊ. ಟಿ.ಎಸ್. ವೆಂಕಣ್ಣಯ್ಯ ಅವರು ಬರೆದ ಕೃತಿ-ಪ್ರಾಚೀನ ಸಾಹಿತ್ಯ. 1927 ಹಾಗೂ 1947ರಲ್ಲಿ ಎರಡು ಮುದ್ರಣ ಕಂಡು ಪ್ರಸ್ತುತ ಕೃತಿಯು ಮೂರನೇ ಆವೃತ್ತಿಯಾಗಿದೆ. ರಾಮಾಯಣ, ಶಾಕುಂತಲ ಹೀಗೆ ಸಂಸ್ಕೃತ ಮೂಲದ ವಿವಿಧ ಗ್ರಂಥಗಳನ್ನು ಕವಿ ರವೀಂದ್ರನಾಥ ಠಾಕೂರು ಅವರು ಬಂಗಾಳಿಯ;ಲ್ಲಿ ಬರೆದ ವಿಮರ್ಶಾ ಲೇಖನಗಳನ್ನು ಈ ಲೇಖಕರು ಕನ್ನಡಕ್ಕೆ ಪರಿವರ್ತಿಸಿದ್ದಾರೆ. ರವೀಂದ್ರರ ಶಾಕುಂತಳಾ ನಾಟಕದ ವಿಮರ್ಶೆಯ ಜೊತೆಗೆ ಕವಿ ಬಂಕಿಮಚಂದ್ರ ಅವರೂ ಬರೆದ ಇದೇ ನಾಟಕದ ವಿಮರ್ಶೆಯೂ ಬಂಗಾಳಿಯಲ್ಲಿದ್ದು, ಅದನ್ನೂ ಸಹ ಕನ್ನಡಕ್ಕೆ ಅನುವಾದಿಸಲಾಗಿದೆ.
ಕೃತಿಯಲ್ಲಿ ರಾಮಾಯಣ, ಮೇಘದೂತ, ಕುಮಾರ ಸಂಭವ ಮತ್ತು ಶಾಕುಂತಲ, ಕಾದಂಬರಿ ಚಿತ್ರ, ಶಾಕುಂತಲ, ಕಾವ್ಯದ ಅನಾದರ, ಧಮ್ಮಪದ, ಶಾಕುಂತಲ, ಮಿರಾಂಡಾ ಮತ್ತು ಡೆಸ್ಟಿಮೋನಾ ಹೀಗೆ ವಿವಿಧ ಅಧ್ಯಾಯಗಳಡಿ ಅನುವಾದಿಸಲಾಗಿದೆ.
©2025 Book Brahma Private Limited.