’ರಥಿಕ-ಸಾರಥಿ ಸಂವಾದ’ ಕೃತಿಯು ಭಗವದ್ಗೀತೆಯ ಭೌತವಾದೀ ವಾಖ್ಯಾನವಾಗಿದೆ. ಮಹಾಬಲೇಶ್ವರ ರಾವ್ ಅವರ ಅನುವಾದಿತ ಕೃತಿ ಇದು. ಕೃತಿಗೆ ಬೆನ್ನುಡಿ ಬರೆದಿರುವ ಚಿ. ರಾಮಕೃಷ್ಣ ಅವರು, ಪ್ರಸ್ತುತ ಗ್ರಂಥದಲ್ಲಿ ಲೇಖಕರು ಗೀತೆಯನ್ನು ಭೌತವಾದಿ ನೆಲೆಯಲ್ಲಿ ನಿಂತು ಅರ್ಥೈಸಲು ಪ್ರಯತ್ನ ಮಾಡಿದ್ದಾರೆ. ಗೀತೆಯ ಐತಿಹಾಸಿಕ ಸಂದರ್ಭದ ಸಮಗ್ರ ಪರಿಚಯ ಮತ್ತು ಅವಲೋಕನವಿಲ್ಲದೆ ಅದರ ಭೌತವಾದಿ ವಿಶ್ಲೇಷಣೆ ಸಾಧ್ಯವಾಗುವುದಿಲ್ಲ. ಆದ್ದರಿಂದಲೇ ಡಿ.ಡಿ ಕೋಸಾಂಬಿ ಮುಂತಾದ ವಿದ್ಯಾಂಸರು ಗೀತೆಯ ಚಾರಿತ್ರಿಕ ಸಂದರ್ಭಕ್ಕೆ ಒತ್ತುಕೊಟ್ಟು ವಿಮರ್ಶೆಯಲ್ಲಿ ತೊಡಗಿದ್ದಾರೆ. ಅದನ್ನು ತಮ್ಮದೇ ವಿಧಾನದಿಂದ ಮಾಡಹೊರಟಿರುವ ಮೋಹನ್ ರಾಜ್ ಅವರು ಕೃಷ್ಣನನ್ನು ಇತಿಹಾಸ ಪುರುಷನೆಂದು ವಾದಿಸಿದ್ದಾರೆ. ಮೂಲತಃ ಗೀತೆಯ ಆಧುನಿಕ ಅಂಶಗಳ ಸಹಾಯದಿಂದ ಅದರ ಮಾಪನಕ್ಕೆ ಹೊರಡಬೇಕಾಗುತ್ತದೆ. ಅಂತಹ ಸಂಕೀರ್ಣ ಗ್ರಂಥವನ್ನು ವೈಚಾರಿಕವಾಗಿ, ಚಾರಿತ್ರಿಕವಾಗಿ, ಅಧ್ಯಯನ ಮಾಡುವುದರಲ್ಲಿ ಹತ್ತಾರು ಹೆಜ್ಜೆಗಳನ್ನು ಕ್ರಮಿಸಿರುವ ಮೋಹನ್ ರಾಜ್ ಪ್ರಶಂಸನೀಯರು. ಈ ಹಾದಿಯಲ್ಲಿ ಇನ್ನೂ ಆಳವಾದ ಅಧ್ಯಯನಗಳು ನಡೆಯಲು ಅವರ ಕೆಲಸ ಸಹಾಯ ನೀಡುತ್ತವೆ. ಗೀತೆಗೆ ನಿಜವಾದ ಗೌರವ ದೊರೆಯುವಂತಾಗುವುದು ಅಂತಹ ವಿಶಾಲ ತಳಹದಿಯ ಮೇಲೆ ಅಧ್ಯಯನ ನಡೆಸಿದಾಗಲೇ ಎಂಬುದನ್ನು ಅವರ ಗ್ರಂಥವು ಮನದಟ್ಟು ಮಾಡಿಕೊಟ್ಟಿದೆ’ ಎಂದಿದ್ದಾರೆ.
©2025 Book Brahma Private Limited.