ಭಾರತೀಯ ಸಂಸ್ಕೃತ ಮಹಾಕಾವ್ಯದ ಕನ್ನಡ ಪದ್ಯಾನುವಾದವೇ-ಕನ್ನಡ ಕಿರಾತಾರ್ಜುನೀಯ. ಸಂಸ್ಕೃತ ಕವಿ ಭಾರವಿಯು ಅರ್ಥ ಗೌರವಕ್ಕೆ ಹೆಸರಾದವನು. ಆತನ ಕಾವ್ಯದಲ್ಲಿಯ ರಸ ಪ್ರೀತಿಗೆ, ಅರ್ಥಸೃಷ್ಟಿಗೆ ಭಂಗ ಬಾರದ ಹಾಗೆ ಡಾ. ಕೆ. ಕೃಷ್ಣಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾರವಿ ಕವಿಯ ಕಾಲ-ದೇಶ-ಜೀವನ ವೃತ್ತಾಂತ ಸೇರಿದಂತೆ ಆತನ ಕೃತಿಗಳು, ಸಂಸ್ಕೃತ ಮಹಾಕಾವ್ಯಗಳಲ್ಲಿ ಕಿರಾತಾರ್ಜುನೀಯ ಕೃತಿಯ ಸ್ಥಾನ, ಕಾವ್ಯದ ಪರಿಚಯ, ಭಾರವಿ ಕವಿಯ ಪಾಂಡಿತ್ಯ, ವರ್ಣನೆಯ ಕೌಶಲ ಎಲ್ಲವನ್ನೂ ವಿಮರ್ಶೆಗೆ ಒಳಪಡಿಸಲಾಗಿದೆ.
©2025 Book Brahma Private Limited.