ಎಲಿಯಟ್ಟನ ಮೂರು ಉಪನ್ಯಾಸಗಳು

Author : ಸಿ.ಪಿ.ಕೆ. (ಸಿ.ಪಿ. ಕೃಷ್ಣಕುಮಾರ್)

Pages 74

₹ 60.00




Year of Publication: 2014
Published by: ಕನ್ನಡ ಸಾಹಿತ್ಯ ಪರಿಷತ್ತು

Synopsys

ಎಲಿಯಟ್ಟನ ಮೂರು ಉಪನ್ಯಾಸಗಳು ಸಿಪಿಕೆ ಅವರ ಅನುವಾದಿತ ಕೃತಿಯಾಗಿದೆ. ಎಲಿಯಟ್ಟನ ವಿಮರ್ಶೆ ಇನ್ನೊಂದು ದೃಷ್ಟಿಯಿಂದಲೂ ಬಹಳ ಗಮನಾರ್ಹವಾದುದು. “ಈ ಯುಗದ ಆಲೋಚನೆ, ಸಂವೇದನೆಗಳ ಮೇಲೆ ಆಳವಾದ ಪ್ರಭಾವ ಬೀರಿದ ಒಬ್ಬ ವಿಮರ್ಶಕನಾದ ಎಲಿಯಟ್ಟನ ಎಲ್ಲ ಗದ್ಯ ಕೃತಿಶ್ರೇಣಿ: ಕನ್ನಡಕ್ಕೆ ಅಗತ್ಯವಾಗಿ ಭಾಷಾಂತರಗೊಳ್ಳಬೇಕು. (ಇದುವರೆಗೆ ಅವನ 'ಆಯ್ದ ಗದ್ಯ'ವಷ್ಟೆ ಭಾಗಶಃ ಕನ್ನಡಕ್ಕೆ ಬಂದಿದೆ. ಈ ದಿಶೆಯಲ್ಲಿ ನನ್ನದೊಂದು ಕಿರುಗಾಣಿಕೆಯಾಗಿ ಎಲಿಯಟ್ಟನ ಮೂರು ಹೆಸರಾಂತ ಉಪನ್ಯಾಸಗಳ ಈ ಅನುವಾದ ಪ್ರಕಟವಾಗುತ್ತಿದೆ. ಇದರಿಂದ ಸಾಹಿತ್ಯಾಸಕ್ತರಿಗೆ ಸ್ವಲ್ಪವಾದರೂ ಉಪಯೋಗವಾಗಬಹುದೆಂದು ನಂಬಿದ್ದೇನೆ" ಎಂದು ಸಿಪಿಕೆ ಹೇಳಿಕೊಂಡಿದ್ದಾರೆ.

About the Author

ಸಿ.ಪಿ.ಕೆ. (ಸಿ.ಪಿ. ಕೃಷ್ಣಕುಮಾರ್)
(08 April 1939)

ಲೇಖಕರು, ಸಂಶೋಧಕರು ಆದ ಸಿ.ಪಿ.ಕೃಷ್ಣಕುಮಾರ್ ಅವರು 08-04-1939ರಂದು ಮೈಸೂರು ಜಿಲ್ಲೆಯ ಕೃಷ್ಣರಾಜ ನಗರ ತಾಲೂಕಿನ ಚಿಕ್ಕನಾಯಕನ ಹಳ್ಳಿಯಲ್ಲಿ ಜನಿಸಿದರು. ತಂದೆ ಪುಟ್ಟೇಗೌಡರು ಮೋಜಿಣಿದಾರರಾಗಿ ಸರಕಾರಿ ಕೆಲಸದಲ್ಲಿದ್ದರು. ಕೃಷ್ಣಕುಮಾರ್ ಅವರು 9 ತಿಂಗಳ ಮಗುವಾಗಿದ್ದಾಗಲೇ ತಾಯಿ ತೀರಿಕೊಂಡರು.  ಸಿಪಿಕೆ ಎಂದೇ ಪ್ರಸಿದ್ಧರಾದ ಅವರು ಜೆ.ಎಸ್.ಎಸ್. ಮಹಾರಾಜಾ ಕಾಲೇಜಿನಿಂದ ಬಿ.ಎ. (ಆನರ್ಸ್) ಪದವಿಯನ್ನು ಪಡೆದರು. 1961 ರಲ್ಲಿ ಮಾನಸಗಂಗೋತ್ರಿಯಲ್ಲಿ ಎಂ.ಎ. ಪದವಿ ಪಡೆದರು.  1962ರಲ್ಲಿ ಸಿ.ಪಿ.ಕೆ. ಅವರ ಮದುವೆ ಶಾರದಾ ಅವರ ಜೊತೆಗೆ ಜರುಗಿತು. 1964ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾದರು.1967ರಲ್ಲಿ ಮಾನಸ ಗಂಗೋತ್ರಿಯಲ್ಲಿ ಅಧ್ಯಾಪಕರಾದರು. 1969ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ...

READ MORE

Related Books