ಡಾ. ಅಜಯಕುಮಾರ ಸಿಂಹ ಅವರು ಇಂಗ್ಲಿಷ್ ನಲ್ಲಿ ಬರೆದ ಕೃತಿಯನ್ನು ‘ಅಲ್ಲಮ ಮತ್ತು ಕಬೀರ’ ಶೀರ್ಷಿಕೆಯಡಿ ಲೇಖಕ ಡಾ. ಕೆ. ಪ್ರೇಮಕುಮಾರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. 12ನೇ ಶತಮಾನದ ಅಲ್ಲಮ ಪ್ರಭು ಹಾಗೂ ಅವರ ಬೆಡಗಿನ ವಚನಗಳನ್ನು 15ನೇ ಶತಮಾನದ ಆರಂಭದಲ್ಲಿದ್ದ ಸಂತ ಕಬೀರದಾಸ್ ಅವರ ದೋಹೆಗಳನ್ನು ಆಧರಿಸಿ, ತೌಲನಿಕವಾಗಿ ಅಧ್ಯಯನ ಮಾಡಿದ್ದೇ ಈ ಕೃತಿ. ಈ ಇಬ್ಬರು ಸಂತರ ವಿಚಾರಗಳು ವ್ಯಕ್ತಿಗತ ಉನ್ನತಿ ಹಾಗೂ ಸಾಮಾಜಿಕ ವಿಕಾಸವನ್ನು ಕೇಂದ್ರೀಕರಿಸಿದ್ದವು. ಎಲ್ಲ ಧರ್ಮಗಳನ್ನು ಮೀರಿದ ಮಾನವೀಯತೆಯನ್ನು ಪ್ರತಿಪಾದಿಸಿದ್ದವು. ಮನುಷ್ಯರ ಮಧ್ಯೆ ನಡೆಯುತ್ತಿದ್ದ ಸಂಕುಚಿತ ಮನಸ್ಸಿನ ಜಾತಿ-ಧರ್ಮ, ಮತೀಯ ಭಾವನೆಗಳನ್ನು ಅಪಹಾಸ್ಯ ಮಾಡಿ, ಮಾನವ ಹೃದಯ ವೈಶಾಲ್ಯತೆ ಮೆರೆಯುವಂತೆ ಆಶಿಸಿದ್ದರು. ಈ ಇಬ್ಬರ ಸಮಾನಾಂತರ ಹೋರಾಟಗಳನ್ನು, ಆಶಯಗಳನ್ನು ತಿಳಿಸುವ ಕೃತಿ ಇದು.
©2024 Book Brahma Private Limited.