ಸಂಸ್ಕೃತ ಕವಿ ಮಮ್ಮಟನ ಮೂಲಗ್ರಂಥದ ಕನ್ನಡಾನುವಾದವೇ ಈ ಕೃತಿ-ಕನ್ನಡ ಕಾವ್ಯ ಪ್ರಕಾಶ ಸಂಪುಟ-1. ಡಾ. ಕೆ. ಕೃಷ್ಣಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕವಿ ಮಮ್ಮಟನ ಕಾವ್ಯ ಮಿಮಾಂಸೆಯನ್ನು ಸವಿಸ್ತಾರವಾಗಿ ಇಲ್ಲಿ ಚರ್ಚಿಸಿ, ಅಗತ್ಯವಿರುವೆಡೆ ಅಡಿ ಟಿಪ್ಪಣಿಯೂ ನೀಡಲಾಗಿದೆ. ಈತನ ಕಾಲ-ದೇಶ, ಸಾಹಿತ್ಯ ಕೃತಿಗಳು, ಸಂಸ್ಕೃತದ ಮೂಲ ಪಠ್ಯದ ಜೊತೆಗೆ ಕನ್ನಡಾನುವಾದವೂ ನೀಡಿದ್ದು, ಓದುಗರಿಗೆ ತೊಂದರೆಯಾಗದು. ಪದ್ಯಮಯವಾದ ಈ ಬರೆಹಗಳನ್ನು ಪದ್ಯಮಯವಾಗಿಯೇ ಲೇಖಕರು ಅನುವಾದಿಸಿದ್ದು, ಮೂಲ ಕೃತಿಯ ಸ್ವಾದವನ್ನೇ ಓದಿಗರಿಗೆ ನೀಡಲು ಯತ್ನಿಸಿದ್ದೇ ಈ ಕೃತಿಯ ವಿಶೇಷ. ಕನ್ನಡ ಕಾವ್ಯ ಪ್ರಕಾಶದ ಪಠ್ಯವನ್ನು ಪ್ರಬುದ್ಧ ಕರ್ಣಾಟಕದಲ್ಲಿ ಧಾರಾವಾಹಿಯಾಗಿ ಪ್ರಕಟಿಸಲಾಗಿತ್ತು.
©2024 Book Brahma Private Limited.