ಹಿರಿಯ ಲೇಖಕಿ ಉಮಾ ಕುಲಕರ್ಣಿ ಹಾಗೂ ವಿರೂಪಾಕ್ಷ ಕುಲಕರ್ಣಿ ಅವರು ಜಂಟಿಯಾಗಿ ಸಂಪಾದಿಸಿದ ಕೃತಿ-ಭೈರಪ್ಪನವರ ಸಾಹಿತ್ಯ, ಮರಾಠಿ ವಿಮರ್ಶೆ. ಕನ್ನಡ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರ ಸಾಹಿತ್ಯವು ಮರಾಠಿ ಸಾಹಿತಿಗಳ ಕಣ್ಣಲ್ಲಿ ಕಂಡ ಬಗೆಯನ್ನು ತೋರುವ ಹತ್ತು ಹಲವು ಬರಹಗಳನ್ನು ಈ ಕೃತಿ ಸಂಪಾದಿಸಿದೆ. ಮರಾಠಿ ಬರಹಗಳನ್ನು ಸಂಪಾದಕರು ಕನ್ನಡಾನುವಾದ ಮಾಡಿದ್ದು, ಕನ್ನಡದ ಒಬ್ಬ ಕಾದಂಬರಿಕಾರ ಹಾಗೂ ಆತನ ಸಾಹಿತ್ಯವನ್ನು ಬೇರೆ ಭಾಷಿಗ ಲೇಖಕರು, ವಿಮರ್ಶಕರು ಹೇಗೆ ಅರ್ಥೈಸಿದ್ದಾರೆ ಎಂಬುದರ ನೋಟ ಇಲ್ಲಿ ಕಾಣಬಹುದು. ಭಾಷಾ ವೈವಿಧ್ಯತೆಯ ಹಿನ್ನೆಲೆಯಲ್ಲಿ, ಸಾಂಸ್ಕೃತಿಕ ಭಿನ್ನತೆಗಳ ಹಿನ್ನೆಲೆಯಲ್ಲಿ ಸಾಹಿತ್ಯವನ್ನು ಗ್ರಹಿಸುವ ಪರಿಗಳ ಅಧ್ಯಯನಕ್ಕೆ ಈ ಕೃತಿಯು ಹಲವು ಒಳನೋಟಗಳನ್ನು ನೀಡುವಂತಿದೆ.
©2025 Book Brahma Private Limited.