'ಮಹಾಭಾರತದ ಜೀವನ ಸಂದೇಶ' ಚಂದ್ರಕಾಂತ್ ಅವರ ವಿಶ್ಲೇಷಣೆಯ ಕೃತಿಯಾಗಿದೆ. ಭಾರತೀಯ ಸಾಹಿತ್ಯ ಪ್ರಪಂಚವಂತೂ ಮಹಾಭಾರತವನ್ನು ಪುನಃ ಪುನಃ ಸೃಷ್ಟಿಸುತ್ತಲೇ ಸಾಗಿದೆ. ಅನುವಾದ, ಅದರ ಕಥೆಗಳನ್ನು ಆಧರಿಸಿದ ಕಥೆ-ಕವನ-ನಾಟಕ- ಕಾದಂಬರಿಗಳು, ವಿಮರ್ಶಾತ್ಮಕ ಕೃತಿಗಳು ಹೀಗೆ ಭಿನ್ನ-ವಿಭಿನ್ನವಾಗಿ ಮಹಾಭಾರತ ಭಾರತೀಯ ಸಾಹಿತ್ಯವನ್ನು ಇಂದಿಗೂ ತುಂಬುತ್ತಲೇ ಇದೆ. ಅಂಥದ್ದೊಂದು ಹೊಸ ಕೃತಿ ಇದೀಗ ನಮ್ಮ ಓದಿಗೆ ಸಿಕ್ಕಿದೆ. ಡಾ.ಚಂದ್ರಕಾಂತ ಅವರು ಮಹಾಭಾರತವನ್ನು ನೋಡುವ ಬಗೆಯೊಂದನ್ನು ಇಲ್ಲಿ ಪ್ರಸ್ತುತಪಡಿಸಿದ್ದಾರೆ.ಅತಿ ಅಪರೂಪವಾದ, ಅತಿ ಅಗತ್ಯವೂ ಎನ್ನುವಂತಿರುವ ಈ ಕೃತಿ ನನಗಂತೂ ತುಂಬಾ ಖುಷಿ ನೀಡಿದೆ. ನನ್ನನ್ನೂ ಮಹಾಭಾರತದ ಬಗ್ಗೆ ಇನ್ನಷ್ಟು ಅಲಿಯಲು ಪ್ರೇರಣೆ ನೀಡಿದೆ. ಮಥಿಸಲು ಅವಕಾಶ ಒದಗಿಸಿದೆ. ನನ್ನೊಬ್ಬ ವಿದ್ಯಾರ್ಥಿ ಇಂಥ ಅಸದೃಶ ಎನ್ನಿಸುವಂಥ, ಅನೂಹ್ಯ ಕೃತಿ ಬರೆದಿದ್ದಾನೆ ಎಂಬುದು ನಿಜಕ್ಕೂ ನನ್ನನ್ನು ಪುಳಕಿತನನ್ನಾಗಿಸಿದೆ. ನಾನು ಮಹಾಭಾರತದ ಒಳನೋಟವನ್ನು ಇನ್ನೊಂದಿಷ್ಟು ಅಲಿಯಲು ನನ್ನ ಶಿಷ್ಯ ನನಗೆ ಗುರುವಾಗಿದ್ದಾನೆ ಎನ್ನುತ್ತಾರೆ ಟಿ. ಎಂ. ಸುಬ್ಬರಾಯ.
©2024 Book Brahma Private Limited.