ಕನ್ನಡ ನುಡಿಯರಿಮೆಯ ಇಣುಕು ನೋಟ

Author : ಡಿ.ಎನ್. ಶಂಕರ ಬಟ್

Pages 128

₹ 120.00




Published by: ಡಾ. ಡಿ.ಎನ್.ಶಂಕರ ಭಟ್ ಮುಂಗರವಳ್ಳಿ
Address: ಭೀಮನಕೋಣೆ ಅಂಚೆ, ಹೊನ್ನೆಸರ, ಸಾಗರ-577417

Synopsys

ಪತ್ರಿಕೆಯೊಂದರಲ್ಲಿ ’ಎಲ್ಲರ ಕನ್ನಡ’ ಎಂಬ ಹೆಸರಿನಲ್ಲಿ ಪ್ರಕಟವಾದ ಒಟ್ಟು ಮೂವತ್ತೆಂಟು ಅಂಕಣ ಬರಹಗಳ ಸಂಕಲನ. ಕನ್ನಡವನ್ನು ವರ್ತಮಾನ ಮತ್ತು ಭವಿಷ್ಯತ್ತಿಗೆ ಸಜ್ಜುಗೊಳಿಸುವುದಕ್ಕಾಗಿ ಕನ್ನಡವೆಂದರೇನು, ಅದರ ಸೊಗಡೇನು, ಹರವು ಏನು, ಕಸುಬು ಏನು, ಮಾತು ಬದಲಾಗುವುದು ಹೇಗೆ ಇತ್ಯಾದಿಗಳ ಬಗ್ಗೆ ಕನ್ನಡಿಗರಲ್ಲಿ ಅರಿವನ್ನು ಉಂಟುಮಾಡಬೇಕಾದದ್ದಿದೆ ಎಂಬ ಆಶಯವನ್ನು ಹೊತ್ತು ವಿಚಾರದ ಬೆಳಕು ಚಲ್ಲುವ ಬರಹಗಳನ್ನು ಈ ಹೊತ್ತಿಗೆಯಲ್ಲಿ ಕೊಡಲಾಗಿದೆ.

About the Author

ಡಿ.ಎನ್. ಶಂಕರ ಬಟ್

ಹಿರಿಯ ಲೇಖಕ ಡಿ.ಎನ್. ಶಂಕರ ಬಟ್ ಅವರು ಅಂತಾರಾಷ್ಟ್ರೀಯ ಖ್ಯಾತಿಯ ಭಾಷಾಶಾಸ್ತ್ರಜ್ಞರು. ಮದ್ರಾಸ್ ವಿಶ್ವವಿದ್ಯಾಲಯದಿಂದ  ಸಂಸ್ಕೃತದಲ್ಲಿ ಸ್ನಾತಕ್ಕೋತ್ತರ ಪದವೀಧರರು.  ಪುಣೆ ವಿಶ್ವವಿದ್ಯಾಲಯದಿಂದ ನುಡಿಯರಿಮೆ(linguistics)ಯಲ್ಲಿ ಪಿ.ಎಚ್.ಡಿ.ಪದವೀಧರರು. ಅಮೇರಿಕಾದ ಸ್ಟ್ಯಾನ್ಪೋರ್‍ಡ್ ಯುನಿವರ್‍ಸಿಟಿ, ಆಸ್ಟ್ರೇಲಿಯಾದ ಲಾ ಟ್ರೋಬೆ ಯುನಿವರ್‍ಸಿಟಿ, ಬೆಲ್ಜಿಯಂ ದೇಶದ ಆಂಟ್ವೆರ್‍ಪ್ ಯುನಿವರ್‍ಸಿಟಿ, ಜರ್‍ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್‍ನಂತಹ ಜಗತ್ತಿನ ಹಲವಾರು ಮುಂಚೂಣಿಯ ವಿಶ್ವವಿದ್ಯಾಲಯಗಳಲ್ಲಿ ಮತ್ತು ಮಯ್ಸೂರಿನಲ್ಲಿರುವ ಬಾರತೀಯ ಬಾಶಾ ಸಂಸ್ತಾನ, ಮಣಿಪುರ ವಿಶ್ವವಿದ್ಯಾಲಯ, ಪುಣೆಯಲ್ಲಿರುವ ಡೆಕ್ಕನ್ ಕಾಲೇಜ್ ಮುಂತಾದೆಡೆ ಕಲಿಸುಗರಾಗಿ, ಅರಕೆಗಾರರಾಗಿ ಕೆಲಸ ಮಾಡಿದ್ದಾರೆ. ನುಡಿಯರಿಮೆಯ ಸುತ್ತ ಬರೆದಿರುವ ಅವರ ಹತ್ತಾರು ಹೊತ್ತಗೆಗಳು ಮತ್ತು ಅರಕೆಯ ಪೇಪರಗಳು (research papers) ಜಗತ್ತಿನೆಲ್ಲೆಡೆ ...

READ MORE

Related Books