ಪರಾಗಸ್ಪರ್ಶ ಪುಳಕದ ಟಚ್

Author : ಶ್ರೀವತ್ಸ ಜೋಶಿ

₹ 135.00




Published by: ಗೀತಾ ಬುಕ್ ಹೌಸ್, ಮೈಸೂರು

Synopsys

ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿನ ಆಯ್ದ ಅಂಕಣ ಬರಹಗಳ ಸಂಗ್ರಹವೇ ಪುಳಕದ ಟಚ್ ಪುಸ್ತಕ. ಬದುಕಿನಲ್ಲಿ ನೈಜ ಜೀವನ ಸೌಂದರ್ಯವನ್ನು ಎಲ್ಲರಿಗೂ ಸರಳವಾಗಿ ತಿಳಿಸಬೇಕೆಂಬ ಅರ್ಥಪೂರ್ಣ ಕಾಳಜಿ ಮತ್ತು ಲಘು ಹಾಸ್ಯದ ಧಾಟಿಯಲ್ಲಿ ಓದುಗರನ್ನು ನಕ್ಕುನಗಿಸುತ್ತಲೇ ಚಿಂತನೆಗೆ ಹಚ್ಚುವ ವಿಶಿಷ್ಟ ಕರಾಮತ್ತುಗಳು ಈ ಬರಹಗಳಲ್ಲಿ ವಿಪುಲವಾಗಿ ಕಾಣಿಸುತ್ತವೆ. ಪ್ರತಿಯೊಂದು ಲೇಖನವೂ ಅದರ ವಸ್ತುವಿನ ಸುತ್ತ ಮಾತ್ರ ಸುತ್ತದೆ ವಿವಿಧ ಸಂಗತಿಗಳ ಸಾಧ್ಯತೆ, ಹೊಂದಿಕೆ, ಹೋಲಿಕೆಗಳಿಂದ ಸೃಜನಶೀಲವಾಗುತ್ತದೆ. ಎಷ್ಟೋ ಸರ್ತಿ ಲೇಖನದ ತಲೆಬರಹವೇ ಓದುವಂತೆ ಪ್ರೇರೇಪಿಸುತ್ತದೆ. ಆರಂಭಿಕ ಹಂತದಲ್ಲೇ ಓದುಗರ ಮನಸ್ಸನ್ನು ಹೈಜಾಕ್ ಮಾಡುತ್ತದೆ. ಕೊನೆತನಕ ಸಲೀಸಾಗಿ ಓದಿಸಿ ಅನುಪಮ ಆನಂದಕ್ಕೆ, ಹದವಾದ ಹಿತಾನುಭವಕ್ಕೆ ಕಾರಣವಾಗುತ್ತದೆ. ಬಾಲ್ಯ ಕಳೆದ ಹಳ್ಳಿ ಪರಿಸರದ ಸುಂದರ ನೆನಪುಗಳು, ಶಿಕ್ಷಣ ಮತ್ತು ವೃತ್ತಿಯಿಂದ ಬಂದಿರುವ ಎಂಜಿನಿಯರ್ ಮನಸ್ಸು, ತಾರ್ಕಿಕ ವಿಶ್ಲೇಷಣೆ, ಸಣ್ಣಸಣ್ಣ ಸಂಗತಿಗಳಲ್ಲೂ ಸ್ವಾರಸ್ಯವನ್ನು ಹುಡುಕುವ ಮನೋಭಾವ, ಅಕ್ಷರಗಳೊಂದಿಗೆ ಆಟವಾಡುತ್ತ ಪದವಿನೋದದಿಂದ ಹೊಸಹೊಸ ಅರ್ಥಗಳನ್ನು ಹುಟ್ಟುಹಾಕುತ್ತ ಸಾಗುವ ನವಿರಾದ ನಿರೂಪಣೆ- ಇವೆಲ್ಲವೂ ಶ್ರೀವತ್ಸ್ ಜೋಶಿಯವರ ಬರವಣಿಗೆಗೆ ತನ್ನದೇ ಆದ ಛಾಪು ನೀಡುತ್ತದೆ. ಕಲೆ, ವಿಜ್ಞಾನ, ಸಂಸ್ಕೃತಿ ಎಲ್ಲವನ್ನೂ ಒಳಗೊಂಡ ವಿಷಯಗಳು ಆಮೀಬದಿಂದ ಅನಂತದತ್ತ ಸಾಗುತ್ತವೆ. ಸಣ್ಣಸಣ್ಣ ಸ್ವಾರಸ್ಯಕರ ಸಂಗತಿಗಳನ್ನು ಬೀಜದೊಳಗಿನ ವೃಕ್ಷದಂತೆ ಮುಂದಿಟ್ಟು ಓದುಗರನ್ನು ಸೂಕ್ಷ್ಮಗ್ರಾಹಿಗಳನ್ನಾಗಿ ಮಾಡುತ್ತವೆ.

About the Author

ಶ್ರೀವತ್ಸ ಜೋಶಿ

ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳದವರಾದ ಶ್ರೀವತ್ಸ ಜೋಶಿ ದಾವಣಗೆರೆಯ ಬಿ.ಡಿ.ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ತಾಂತ್ರಿಕ ಶಿಕ್ಷಣ ಪಡೆದರು. ಕಲಿತದ್ದು  ಎಂಜಿನಿಯರಿಂಗ್ ಆದರೂ ಕನ್ನಡದ ಬಗ್ಗೆ ಅಭಿಮಾನವಷ್ಟೇ ಅಲ್ಲದೆ ಪತ್ರಿಕಾರಂಗದ ಬಗ್ಗೆ ಆಸಕ್ತಿಯೂ ಹೊಂದಿದ್ದಾರೆ. ಪ್ರಸ್ತುತ ಅಮೆರಿಕದ ವರ್ಜೀನಿಯಾದಲ್ಲಿ ವೃತ್ತಿಜೀವನ ನಡೆಸುತ್ತಿರುವ ಶ್ರೀವತ್ಸ ಜೋಶಿ ಕನ್ನಡದ ಪ್ರಸಿದ್ಧ ಪತ್ರಿಕೆಗಳ ಅಂಕಣ ಬರಹಗಾರರಾಗಿಯೂ ಕೂಡ ಹೆಸರು ಮಾಡಿದ್ದಾರೆ. ಕನ್ನಡ ನಾಡು, ನುಡಿ, ಭಾಷೆಯ ಬಗ್ಗೆ ಅಭಿಮಾನ ಹೊಂದಿರುವ ಇವರು ದಟ್ಸ್ ಕನ್ನಡ.ಕಾಮ್ ಅಂತರ್ಜಾಲ ಕನ್ನಡ ಪತ್ರಿಕೆಯಲ್ಲಿ ಸತತ ಐದು ವರ್ಷಗಳ ವರೆಗೆ ವಿಚಿತ್ರಾನ್ನ ಹೆಸರಿನ ಸಾಪ್ತಾಹಿಕ ಅಂಕಣವನ್ನು ...

READ MORE

Related Books