ಬ್ರಾಹ್ಮಣವಾದಿ ಭಾರತ v/s ದಲಿತ ಭಾರತ

Author : ಸನತಕುಮಾರ ಬೆಳಗಲಿ

Pages 262

₹ 160.00




Year of Publication: 2016
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ ಹೋಟೆಲ್, ಗದಗ- 582101
Phone: 9480286844

Synopsys

ಹಿರಿಯ ಪತ್ರಕರ್ತ ಸನತ್‌ ಕುಮಾರ ಬೆಳಗಲಿ ಅವರು ವಿವಿಧ ಪತ್ರಿಕೆಗಳಿಗೆ ಬರೆದಿರುವ ಅಂಕಣ ಬರಹಗಳನ್ನು ಕೃತಿಯಲ್ಲಿ ಕೊಟ್ಟಿದ್ದಾರೆ.  56 ಲೇಖನಗಳು ಇರುವ ಈ ಕೃತಿಯಲ್ಲಿ, ಮಾಧ್ಯಮಗಳು, ಜಾತೀಯತೆ, ಸಾಹಿತ್ಯ ರಾಜಕೀಯ, ಅಂಬೇಡ್ಕರ್‌, ಮೀಸಲಾತಿ, ಸಾಮ್ರಾಜ್ಯಶಾಹಿ ವಿರುದ್ಧದ ಹೋರಾಟ, ಟಿಪ್ಪು, ಬ್ರಾಹ್ಮಣರ ಹಿಂದುತ್ವದ ಮುಖವಾಡ, ಹಿಂದುತ್ವ ಮತ್ತು ಲಿಂಗಾಯತ ಮುಖಾಮುಖಿ, ಗಾಂಧಿಯನ್ನು ಕೊಂದ ದಿನ, ಹೀಗೆ  ಪ್ರಮುಖ ವಿಷಯಗಳ ಕುರಿತು ವಿವರಗಳನ್ನು ಒದಗಿಸಿದ್ದಾರೆ. 

About the Author

ಸನತಕುಮಾರ ಬೆಳಗಲಿ
(21 March 1953)

ಎಡಪಂಥೀಯ ವಿಚಾರಧಾರೆಯ ಪತ್ರಕರ್ತ ಸನತಕುಮಾರ ಬೆಳಗಲಿ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿಯವರು. ಮೊದಲಿನಿಂದಲೂ ಬಸವರಾಜ ಕಟ್ಟೀಮನಿ, ನಿರಂಜನ, ಜಿ. ರಾಮಕೃಷ್ಣ ಮುಂತಾದ ಸಾಹಿತಿಗಳೊಂದಿಗೆ ಒಡನಾಟವಿದ್ದು, ಜಾತ್ಯತೀತ, ಪ್ರಗತಿ ಪರ ಚಿಂತನೆಗಳತ್ತ ಒಲವು ಬೆಳೆಸಿಕೊಂಡವರು. ಓಕಳಿ ಆಟದ ನೆಪದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯದ ತಮ್ಮೂರಿನ ಘಟನೆಯನ್ನು ‘ಷಂಡ ಸಮಾಜದಲ್ಲಿ ದುಶ್ಯಾಸನರ ಕೇಕೆ’ ಶೀರ್ಷಿಕೆಯಡಿ ಸಂಯುಕ್ತ ಕರ್ನಾಟಕದ ((19-6-1975) ಮುಖಪುಟದಲ್ಲಿ ಬರೆದ ಲೇಖನವು ಅಂದಿನ ಸರ್ಕಾರದ ಕಣ್ಣು ತೆರೆಸಿ, ಅಪರಾಧಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಪ್ರೇರೇಪಿಸಿತ್ತು ಮಾತ್ರವಲ್ಲ;ಸಾವಳಗಿಯಲ್ಲಿ ಓಕುಳಿಯೇ ನಿಷೇಧಿಸಿ ‘ಮಹಿಳೆಯರ ಮೇಲಿನ ದೌರ್ಜನ್ಯವನ್ನು ಸರ್ಕಾರ ಸಹಿಸದು. ...

READ MORE

Related Books